ನಕಲಿ ಸಹಿ ಮಾಡಿ ನಾಟಾ ಬಿಡುಗಡೆ ; ಫಾರೆಸ್ಟ್ ಗಾರ್ಡ್ ಸಸ್ಪೆಂಡ್

ಚಾಮರಾಜನಗರ, ಆ. 21. ನಕಲಿ ಸಹಿ ಮಾಡಿ ನಾಟ ಬಿಡುಗಡೆ ಮಾಡಿದ ಆರೋಪದ ಮೇಲೆ ಅರಣ್ಯ ಇಲಾಖೆ ದಿಲೀಪ್ ಕುಮಾರ್ ಎಂಬ ಗಾರ್ಡ್‍ನನ್ನು ಅಮಾನತು ಮಾಡಲಾಗಿದೆ. ಕಳೆದ ಏಪ್ರೀಲ್ ನಲ್ಲಿ ಕೇರಳ ಮೂಲದ ರಾಜನ್ ಎಂಬ ಮರದ ವ್ಯಾಪಾರಿ ಅಕ್ರಮವಾಗಿ ಕರ್ನಾಟಕದಿಂದ ಮರ ಸಾಗಾಣಿಕೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಗುಂಡ್ಲುಪೇಟೆ ಆರ್.ಎಫ್.ಓ. ನವೀನಕುಮಾರ್ ಲಾರಿಯನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದರು..
ಪ್ರಕರಣಕ್ಕೆ ಸಂಬಂಧಿಸಿದಂತೆ 2ಲಕ್ಷ ರೂಪಾಯಿ ಹಣವನ್ನು ಕಟ್ಟಿಸಿಕೊಂಡು ಲಾರಿ ಮತ್ತು ನಾಟವನ್ನು ಬಿಡುಗಡೆ ಮಾಡುವಂತೆ ಬಂಡೀಪುರ ಸಿ.ಎಫ್. ಅಂಬಾಡಿ ಮಾಧವ್ ಆದೇಶ ಮಾಡಿದ್ದರು. ಗಾರ್ಡ್ ದಿಲೀಪ್ ಕೇವಲ 50ಸಾವಿರ ಹಣ ಕಟ್ಟಿಸಿಕೊಂಡು ರಾಜನ್ ಎಂಬ ವ್ಯಕಿಯಿಂದ 1ಲಕ್ಷ ಹಣವನ್ನು ಮೇಲಾಧಿಕಾರಿಗಳಿಗೆ ನೀಡಬೇಕೆಂದು ಹಣ ವಸೂಲಿ ಮಾಡಿ ಲಾರಿ ಬಿಡುಗಡೆ ಮಾಡಿದ್ದನು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದೇ ಗಾರ್ಡ್ ರಕ್ಷಿತ ಎಂಬುವವನ್ನು ಅಮಾನತ್ತು ಮಾಡಲಾಗಿತ್ತು.
ಹೆಚ್ಚಿನ ವಿಚಾರಗಾಗಿ ಪಿ.ಸಿ.ಸಿ.ಎಫ್ ವರೆಗೂ ಪ್ರಕರಣ ಹೋಗಿತ್ತು. ವಿಚಾರಣೆ ವೇಳೆ ದಿಲಿಫ್ ಕುಮಾರ್ ಎಸಗಿರುವ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ದಿಲೀಪ್ ಕುಮಾರನನ್ನು ಸೇವೆಯಿಂದ ಅಮಾನತ್ತು ಮಾಡಿ ಬಂಡೀಪುರ ಸಿ.ಎಫ್. ಅಂಬಾಡಿ ಮಾಧವ್ ಆದೇಶಿಸಿದ್ದಾರೆ.

Leave a Comment