ನಕಲಿ ಪತ್ರಕರ್ತನಿಂದ ವ್ಯಕ್ತಿಗೆ ಹಲ್ಲೆ

ಮುಂಡಗೋಡ ಸೆ 11- ವ್ಯಕ್ತಿಯೋರ್ವತಾನು ಪತ್ರಕರ್ತನೆಂದು ಹೇಳಿಕೊಂಡು ಕುರಿ ಮಾಂಸ ಮಾರಾಟಗಾರನಿಗೆ ಬೆದರಿಕೆ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಕಾತೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕಾತೂರ ಗ್ರಾಮದ ಮಾಲ್ತೇಶ ಜಾಡರ ಎಂಬುವವನೆ ಕುರಿ ಮಾಂಸ ಮಾರಾಟಗಾರನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ. ಈತ ಕಳೆದ ಹಲವು ದಿನಗಳಿಂದ ರೋಗಗ್ರಸ್ಥ ಕುರಿಗಳನ್ನು ಕತ್ತರಿಸಿ ಮಾರಾಟ ಮಾಡುತ್ತೀರಿ ಹಾಗಾಗಿ ತನಗೆ 5 ಸಾವಿರ ಹಣ ನೀಡಿ ಇಲ್ಲದೇ ಹೋದರೆ ನಿಮ್ಮ ಬಗ್ಗೆ ಇಲ್ಲಸಲ್ಲದ ಸುದ್ದಿ ಪ್ರಕಟಿಸುತ್ತೇನೆ ಎಂದು ಬೆದರಿಕೆ ಹಾಕಿದ್ದು, ಪದೇ ಪದೇ ಕಿರುಕುಳ ನೀಡುತ್ತ ಬಂದಿದ್ದಾನೆ ಎನ್ನಲಾಗಿದ್ದು, ಮಂಗಳವಾರ ಪೋಟೊ ತೆಗೆಯಲು ಹೋಗಾದ ಏಕೆ ಪದೇ ಪದೇ ಪೋಟೊ ಹೊಡೆಯುತ್ತೀಯಾ ಎಂದು ಪ್ರಶ್ನಿಸಿದ್ದಕ್ಕೆ ಮಾರುತಿ ಅರ್ಜುನ ಕಲಾಲ ಎಂಬುವವನ ಮೇಲೆ ಮಾರಂಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಮುಂಡಗೋಡ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂದಿಸಿದ್ದಾರೆ.

Leave a Comment