ನಕಲಿ ಆಪ್ ಬಳಕೆ ರೈಲ್ವೆ ಇ-ಟಿಕೇಟ್ ಜಾಲ ಪತ್ತೆ

ನವದೆಹಲಿ, ಜ. ೨೨- ನಕಲಿ ಆಪ್ ಬಳಸಿ ರೈಲ್ವೆ ಇ-ಟಿಕೇಟ್‌ಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ರೈಲ್ವೆ ಭದ್ರತಾ ಪಡೆ ಪತ್ತೆಹಚ್ಚಿದ್ದು ಈ ಜಾಲ ಭಯೋತ್ಪಾದನೆ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ನಕಲಿ ಇ-ಟಿಕೇಟ್ ಮಾರಾಟ ಮಾಡುತ್ತಿರುವ ಈ ಜಾಲ ದುಬೈನ ಭಯೋತ್ಪಾದಕ ಸಂಘಟನೆ ಸೇರಿದಂತೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇತರ ಭಯೋತ್ಪಾದಕರ ಸಂಘಟನೆಗಳಿಗೆ ಹಣಕಾಸು ಒದಗಿಸುತ್ತಿರುವ ಕುರಿತು ಶಂಕೆ ವ್ಯಕ್ತಪಡಿಸಿರುವ ಅಧಿಕಾರಿಗಳು ಕಾನೂನುಬಾಹಿರ ಟಿಕೇಟ್ ಮಾರಾಟದಲ್ಲಿ ಭಾಗಿಯಾಗಿರುವ ಭುವನೇಶ್ವರ ನಿವಾಸಿ ಗುಲಾಂ ಮುಸ್ತಾಫ್ (೨೮) ಎನ್ನುವವನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಟಿಕೇಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಮುಸ್ತಾಫ್ ನಂತರ ನಕಲಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ ಇ-ಟಿಕೇಟ್ ಬುಕ್ಕಿಂಗ್ ಹಾಗೂ ವಂಚಿಸುತ್ತಿದ್ದ ಎನ್ನಲಾಗಿದ್ದು, ಇವನ ಬಳಿಯಿದ್ದ ೫೬೩ ಐಡಿಗಳು, ೨೪೦೦ ಎಸ್‌ಬಿ ಖಾತೆಗಳ ಪಟ್ಟಿ, ೬೦೦ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಖಾತೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಘಟನೆ ಸಂಬಂಧಿಸಿದಂತೆ ಕರ್ನಾಟಕದ ಪೊಲೀಸರು, ಗುಪ್ತಚರ ದಳ, ವಿಶೇಷ ಬ್ಯುರೋ, ಇಡಿ, ಎನ್‌ಐಎ ಅಧಿಕಾರಿಗಳು, ವಿಚಾರಣೆ ನಡೆಸುತ್ತಿರುವ ಕುರಿತು ರೈಲ್ವೆ ಭದ್ರತಾ ಪಡೆ ಮಹಾನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ. ಈ ಜಾಲ ಭಾರತದ ಸಾಫ್ಟ್‌ವೇರ್ ಕಂಪನಿಯೊಂದಿಗೆ ಸಂಪರ್ಕವೊಂದಿರುವ ಸಂಖ್ಯೆ ವ್ಯಕ್ತಪಡಿಸಿರುವ ಪೊಲೀಸರು ಆ ಕಂಪನಿ ಸಿಂಗಾಪೂರ್‌ನಲ್ಲಿ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದೆ ಎಂದಿದ್ದಾರೆ.
ಈ ಜಾಲದ ಮಾಸ್ಟರ್ ಮೈಂಡ್ ಅಮೀದ್ ಅಶ್ರಫ್ ಇದೇ ವ್ಯವಹಾರದಿಂದ ತಿಂಗಳಿಗೆ ಕೋಟ್ಯಂತರ ರೂ. ಸಂಪಾದಿಸುತ್ತಿದ್ದಾನೆ. ಹಾಗೂ ಸಾಫ್ಟ್‌ವೇರ್ ಡೆವಪರ್ ಆಗಿರುವ ಈತನು ಉತ್ತರಪ್ರದೇಶ್ ಶಾಲೆಯ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿ ಎಂದು ತಿಳಿಸಿದ್ದಾರೆ.
ಪೊಲೀಸರು ಮುಸ್ತಾಫ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಆತನ ಬಳಿಯಿರುವ ಹಾಕ್ ಸಿಸ್ಟಮ್, ನಕಲಿ ಆಧಾರ್ ಕಾರ್ಡ್ ಸಿದ್ಧಪಡಿಸುವ ಆಪ್ ಹಾಗೂ ಇನ್ನಿತರ ಅನಧಿಕೃತ ಕೃತ್ಯಗಳಿಗೆ ಬಳಸುತ್ತಿದ್ದ ಇತರ ಸಾಧನೆಗಳನ್ನು ವಶಪಡಿಸಿಕೊಂಡಿದ್ದಾರೆ.

Leave a Comment