ನಂದಿ ವಿಗ್ರಹ ಕಳವು

ಪಾವಗಡ, ಆ. ೭- ತಾಲ್ಲೂಕಿನ ಕದಿರೇಹಳ್ಳಿ ಗ್ರಾಮದ ಕೆರೆಯಲ್ಲಿದ್ದ ನಂದಿ ವಿಗ್ರಹವನ್ನು ದುಷ್ಕರ್ಮಿಗಳು ಕದ್ದೊಯ್ದಿರುವ ಘಟನೆ ನಡೆದಿದೆ.

ಗ್ರಾಮದ ಕೆರೆ ಅಂಗಳದಲ್ಲಿನ ಆಂಜನೇಯ ಸ್ವಾಮಿ ದೇಗುಲದ ಮುಂಭಾಗ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು. ನಂದಿ ವಿಗ್ರಹವಿದ್ದ ಸ್ಥಳದಲ್ಲಿ ನಿಂಬೆಹಣ್ಣು, ಅರಿಸಿನ, ಕುಂಕುಮ ಇತ್ಯಾದಿ ಪೂಜಾ ದ್ರವ್ಯಗಳನ್ನು ಹಾಕಲಾಗಿದೆ.

ಕೆಲ ತಿಂಗಳ ಹಿಂದೆ ನಿಡಗಲ್‌ದುರ್ಗದ ವಿಗ್ರಹಗಳನ್ನೂ ದುಷ್ಕರ್ಮಿಗಳು ಕದ್ದೊಯ್ದಿದ್ದರು. ಈ ಭಾಗದಲ್ಲಿ ವಿಗ್ರಹ ಕಳವು ಪ್ರಕರಣಗಳು ಮರುಕಳಿಸುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

Leave a Comment