ನಂದಿ ಮೂರ್ತಿ ಬಿರುಕಿಗೆ ಅಂಟು, ಕಲ್ಲಿನ ಪುಡಿ ಮಿಶ್ರಣದ ಲೇಪನ

ಮೈಸೂರು, ಜುಲೈ 12 : ಹದಿನೈದು ದಿನಗಳ ಹಿಂದೆ ಚಾಮುಂಡಿ ಬೆಟ್ಟದ ಏಕಶಿಲಾ ಮೂರ್ತಿ ನಂದಿ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಾತ್ಕಾಲಿಕವಾಗಿ ಕಲ್ಲಿನ ಪುಡಿ ಮಿಶ್ರಣದೊಂದಿಗೆ ಅಂಟನ್ನು ಲೇಪಿಸಿ ಹಾನಿಯಾಗದಂತೆ ತಡೆಯಲಾಗಿದೆ.

ನಂದಿಯ ಪಕ್ಕೆ, ಬೆನ್ನು ಮತ್ತು ಕುತ್ತಿಗೆಯ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದು ಪಾರಂಪರಿಕ ಶಿಲೆಯಾಗಿದ್ದರಿಂದ ಆತಂಕವೂ ಉಂಟಾಗಿತ್ತು. ಸದ್ಯಕ್ಕೆ ಹಾನಿಯನ್ನು ಅಲ್ಪ ಪ್ರಮಾಣದಲ್ಲಿ ತಡೆಯುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಂಡಿದ್ದು, ಬಿರುಕಿಗೆ ಲೇಪಿಸಲಾಗಿದೆ.

ನಂದಿಮೂರ್ತಿಯಲ್ಲಿನ ಬಿರುಕಿಗೆ ಆತಂಕ ಪಡುವ ಅಗತ್ಯವಿಲ್ಲ. ಗಂಭೀರ ಸ್ವರೂಪದ ಬಿರುಕುಗಳು ಕಂಡುಬಂದಿಲ್ಲ. ಆದರೂ ಸಮಿತಿ ವತಿಯಿಂದ ಏನು ಮಾಡಬೇಕು ಎಂಬುದನ್ನು ವರದಿ ಮೂಲಕ ಸಲ್ಲಿಸಿದ್ದೇವೆ. ತುರ್ತಾಗಿ ಕ್ರಮ ಕೈಗೊಂಡರೆ ಒಳ್ಳೆಯದು ಎಂದು ಹೇಳಿದ್ದಾರೆ ಪಾರಂಪರಿಕ ಸಮಿತಿ ತಜ್ಞರು.

Leave a Comment