ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಮನವಿ

ಕಲಬುರಗಿ ಆ 11: ಹೈದರಾಬಾದ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಡಾ ನಂಜುಂಡಪ್ಪ ವರದಿ ಶಿಫಾರಸ್ಸುಗಳ ಅನುಷ್ಠಾನವೇ ಏಕೈಕ ಪರಿಹಾರವಾಗಿದ್ದು, ಕೇಂದ್ರ ಸರಕಾರ ವರದಿಯ ಪ್ರಾಮಾಣಿಕ ಅನುಷ್ಠಾನಕ್ಕೆ ಮುಂದಾಗಬೇಕೆಂದು 371(ಜೆ) ಜಾರಿ ಹಾಗೂ ಹೈಕ ಅಭಿವೃದ್ಧಿ ಆಂದೋಲನ ಸಮಿತಿ ಅಧ್ಯಕ್ಷ ಮಾರುತಿ ಮಾನ್ಪಡೆ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು

ಮೊನ್ನೆ ನಗರಕ್ಕೆ ಬಂದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಹೈಕ ಅಭಿವೃದ್ದಿಯ ಬಗ್ಗೆ ಕಳಕಳಿ ವ್ಯಕ್ತಪಡಿಸಿ  ಇಲ್ಲಿ ಅಭಿವೃದ್ಧಿಯಾಗದ ಅನೇಕ ಯೋಜನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಇದು ಕೇವಲಅವರ  ಬಾಯಿಮಾತಿನ ಸಹಾನುಭೂತಿ ಮತ್ತು ರಾಜಕೀಯ ಉದ್ದೇಶದ ಹೇಳಿಕೆಯಾಗಬಾರದು. ಅವರಿಗೆ ನಿಜವಾದ ಕಳಕಳಿ ಇದ್ದರೆ ಕೇಂದ್ರಕ್ಕೆ ನಿಯೋಗ ಕೊಂಡೊಯ್ದು ಹೈಕ ಸಮಗ್ರ ಅಭಿವೃದ್ದಿಗೆ ಕೇಂದ್ರ ಸರಕಾರದ ಕೊಡುಗೆಗೆ ಸರ್ವಪ್ರಯತ್ನ ನಡೆಸುವಂತೆ ಕೋರಿದರು.

ಹೈಕ ಭಾಗದ  ರೇಷ್ಮೆ ವ್ಯವಸಾಯ, ಪಶುಪಾಲನೆ, ರೈಲ್ವೆ ಯೋಜನೆಗಳು,ವಿಮಾನ ನಿಲ್ದಾಣ, ಪ್ರವಾಸೋದ್ಯಮ ಸೇರಿದಂತೆ ಹಲವಾರು  ವಿಭಾಗಗಳಿಗೆ  ಅನುದಾನ ಒದಗಿಸಲು ನಂಜುಡಪ್ಪ ವರದಿ ನೀಡಿದ ಶಿಫಾರಸುಗಳು ಕೇವಲ ಕಾಗದದಲ್ಲಿಯೇ ಉಳಿದಿವೆ ಎಂದು ಮಾರುತಿ ಮಾನ್ಪಡೆ  ಹೇಳಿದರು..

Leave a Comment