ನಂಜನಗೂಡು ಜಾತ್ರೆ ಸರಳ ಆಚರಣೆ

ನಂಜನಗೂಡು: ಏ.3- ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನಲ್ಲಿ ನಾಳೆ ಭಕ್ತರಿಲ್ಲದೆ ದೊಡ್ಡ ಜಾತ್ರೆ ಸರಳವಾಗಿ ನಡೆಯುತ್ತಿದೆ. ಪ್ರತಿವರ್ಷವೂ ಲಕ್ಷಾಂತರ ಭಕ್ತಾದಿಗಳ ನಡುವೆ ವಿಜೃಂಭಣೆಯಿಂದ ಪಂಚ ಮಹಾರಥೋತ್ಸವವನ್ನು ಸಾವಿರಾರು ಭಕ್ತರು ನಡುವೆ ದೇವಾಲಯದ ಆವರಣದಲ್ಲಿ ನೆಡೆಯುತ್ತಿತ್ತು. ನಂಜನಗೂಡು ಕ್ಷೇತ್ರ 5 ರಥಗಳನ್ನು ಎಳೆಯುವ ಏಕೈಕ ಕ್ಷೇತ್ರವೆಂದು ಈ ಕ್ಷೇತ್ರವು ಪ್ರಸಿದ್ಧವಾಗಿದೆ. ಸಾವಿರಾರು ಭಕ್ತರು ರಥವನ್ನು ನೋಡಿ ಭಕ್ತಿ ಭಾವದಿಂದ ಎಳೆಯುವುದು ರೂಢಿ.

ಈ ಬಾರಿ ಕೋ ವಿಡ್ 19 ರೋಗಕ್ಕೆ ನಂಜನಗೂಡು ತತ್ತರಿಸಿದೆ ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರ ಸಂಪೂರ್ಣ ಸ್ತಬ್ಧವಾಗಿದೆ. ದೇವಸ್ಥಾನದ ಬಾಗಿಲು ಮುಚ್ಚಲಾಗಿದೆ. ಇದರ ನಡುವೆಯೂ ಸಂಪ್ರದಾಯದಂತೆ ದೇವಸ್ಥಾನದ ಒಳ ಭಾಗದಲ್ಲಿ ಪ್ರತಿನಿತ್ಯ ಪೂಜೆ ಪುರಸ್ಕಾರ ನಡೆಯುತ್ತಿದ್ದು ಭಕ್ತರಿಗೆ ಯಾವುದೇ ಅವಕಾಶವಿಲ್ಲ.

ಸಂಪ್ರದಾಯಕ್ಕೆ ತೊಂದರೆಯಾಗದಂತೆ ಜಾತ್ರೆಯೂ ಸಕಲ ಉತ್ಸವಗಳನ್ನು ದೇವಾಲಯ ಒಳಭಾಗದಲ್ಲಿ ಭಕ್ತರಿಗೆ ಅವಕಾಶವಿಲ್ಲದೆ ನಡೆಯುತ್ತಿದೆ. ಪ್ರತಿಯೊಬ್ಬರೂ ಸರ್ಕಾರ ಆದೇಶದಂತೆ ಅಂತರ ಕಾಯ್ದುಕೊಂಡು ನಡೆಯುತ್ತದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರಯ್ಯ ಸಂಜೆವಾಣಿಗೆ ತಿಳಿಸಿದ್ದಾರೆ.

ತೇರು ಎಳೆಯುವ ಕಾರ್ಯಕ್ರಮ ವಿಲ್ಲ ದೇವಾಲಯ ಒಳಗಡೆ ಅಂಗಳದಲ್ಲಿ ಸೀಮಿತವಾದ ಉತ್ಸವ ನಿಗದಿತ ಸಮಯಕ್ಕೆ ಸರಿಯಾಗಿ ಎಲ್ಲ ಪೂಜೆ ಪುರಸ್ಕಾರಗಳು ದೇವಸ್ಥಾನಗಳ ಒಳಭಾಗದಲ್ಲಿ ನಡೆಯುತ್ತದೆ. ಭಕ್ತರಿಗೂ ವೀಕ್ಷಣೆಗೆ ಅವಕಾಶ ವಿಲ್ಲ ಎಂದು ದೇವಾಲಯದ ಈಓ ಶಿವಕುಮಾರಯ್ಯ ತಿಳಿಸಿದ್ದಾರೆ.

Leave a Comment