ನಂಜನಗೂಡಿನಲ್ಲಿ ಯೋಗಪಟುಗಳಿಂದ ಜಾಥಾ

ನಂಜನಗೂಡು, ಜೂ.19- ವಿಶ್ವ ಯೋಗ ದಿನಾಚರಣಾ ಅಂಗವಾಗಿ ನಂಜನಗೂಡಿನ ದೇವೀರಮ್ಮನಹಳ್ಳಿ ಗ್ರಾಮದಲ್ಲಿರುವ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಯೋಗ ಶಿಬಿರವನ್ನು ದಿನಾಂಕ:16.5.2017 ರಿಂದ ಒಂದು ತಿಂಗಳ ಶಿಬಿರ ಕಾರ್ಯಕ್ರಮವನ್ನು, ಮಕ್ಕಳು, ಯುವಕರು, ಪುರುಷರು, ಮಹಿಳೆಯರು, ವೃದ್ದರಿಗೂ ಅಭ್ಯಾಸ ನೀಡಲಾಗಿತ್ತು.
ವಿಶ್ವ ಯೋಗದಿನಾಚರಣಾ ಅಂಗವಾಗಿ ದಿ.21.06.2017 ರಂದು ನಡೆಯಲಿರುವ ಕಾರ್ಯಕ್ರಮದ ಪೂರ್ವಭಾವಿಯಾಗಿ ಇಂದು ನಂಜನಗೂಡು ಪಟ್ಟಣದ ಮುಖ್ಯ ಬೀದಿಗಳಲ್ಲಿ ಜಾತಾಮಾಡಲಾಯಿತು.
ಯೋಗಪಟುಗಳ ಜಾತ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಕಳಲೆ ಕೇಶವಮೂರ್ತಿ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿ ವಿಶ್ವ ಯೋಗದಿನಾಚರಣೆಯ ಪೂರ್ವಭಾವಿ ಜಾಥಾಕಾರ್ಯಕ್ರಮಕ್ಕೆ ಶುಭಕೋರಿದರುï.
ಜಾಥಾ ಕಾರ್ಯಕ್ರಮದಲ್ಲಿ ಅನೇಕ ಜಾನಪದ ಕಲಾವಿಧರುಗಳು, ಗೊರವರ ಕುಣಿತ, ಗಾರುಡಿಗೊಂಬೆ, ಡೋಲು ಕುಣಿತ, ವೀರಗಾಸೆ ಕುಣಿತ ಮುಂತಾದವು ಜಾತಾ ಕಾರ್ಯಕ್ರಮಕ್ಕೆ ಮೆರೆಗುಕೊಟ್ಟು ವಿಶ್ವ ಯೋಗದಿನಾಚರಣೆಯನ್ನು ನೆನೆಪು ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಮತ್ತು ಯೋಗ, ಅಯುಷ್ ಇಲಾಖೆ, ಪತಂಜಲಿ ಯೋಗ ಶಿಕ್ಷಣ ಅಧ್ಯಕ್ಷ ರೇವಣ್ಣ, ಯೋಗ ಗುರು ಗಣೇಶ್, ಹರೀಷ್, ಸೇರಿದಂತೆ ದಳವಾಯ್ ಶಾಲೆ ಮಕ್ಕಳು, ನೀಲಕಂಠೇಶ್ವರ ಶಾಲಾಮಕ್ಕಳು, ಸೇರಿದಂತೆ ಹಲವಾರು ಶಾಲೆ ಸೇರಿದಂತೆ 600ಕ್ಕೂ ಹೆಚ್ಚು ಮಕ್ಕಳು ಜಾತದಲ್ಲಿ ಭಾಗವಹಿಸಿದ್ದರು.
ಋಷಿಮುನಿಗಳು ಶರೀರದ ಸ್ವಾಸ್ತ್ಯವನ್ನು ಗಮನದಲ್ಲಿಟ್ಟುಕೊಂಡು ದೈಹಿಕವಾಗಿ ಸುಮಾರು 106 ಯೋಗಾಸನಗಳನ್ನು ಪ್ರಯೋಗ ರೂಪದಲ್ಲಿ ಕಲಿತು ಅನ್ಯರಿಗೂ ಭೋಧಿಸುತ್ತಾ ಸುಮಾರು 177 ರಾಷ್ಟ್ರಗಳಲ್ಲೂ ಪರಿಚಿತವಾಗಿ, ಪ್ರಕ್ಯಾತಿಯಲ್ಲಿರುವುದನ್ನು ಕಾಣಬಹುದಾಗಿದೆ. ಈ ಯೋಗದಿಂದ ಮಾನಸಿಕವಾಗಿ ದೃಡತೆ,ದೈಹಿಕ ಶಕ್ತಿ, ಆರೋಗ್ಯ ಸುದಾರಣೆ, ಮಾನಸಿಕ ಒತ್ತಡ, ಸ್ಥಿರತೆ, ಇವುಗಳಿಂದ ಸಂತುಷ್ಟವಾಗಿ ಜೀವನಸಾಗಿಸಲು ಬೇಕಾದ ಮಾರ್ಗವಾಗಿದೆ. ಎಂದು ಹಿರಿಯರ ಅನುಭವದ ನುಡಿಯಾಗಿವೆ.

Leave a Comment