ಧ್ರುವಸರ್ಜಾ -ಪ್ರೇರಣಾ ಅದ್ಧೂರಿ ವಿವಾಹಕ್ಕೆ ಭರ್ಜರಿ ತಯಾರಿ

ಬೆಂಗಳೂರು, ನ ೧೯- ಸ್ಯಾಂಡಲ್ ವುಡ್‌ನ ಆಕ್ಷನ್ ಪ್ರೀನ್ಸ್ ಧ್ರುವಾ ಸರ್ಜಾ ಹಾಗೂ ಪ್ರೇರಣ ಮದುವೆಗೆ ಭಾರಿ ಸಿದ್ದತೆ ನಡೆಸಲಾಗಿದೆ. ಇದಕ್ಕಾಗಿ ಎರಡು ಕುಟುಂಬಗಳಲ್ಲಿ ಹಬ್ಬದ ವಾತಾವರಣ ಕಂಡು ಬಂದಿದ್ದು, ಮದುವೆ ಸಂಭ್ರಮಕ್ಕಾಗಿ ಭಾರಿ ಸಿಂಗಾರ ನಡೆದಿದೆ.

 ಕಳೆದ ವರ್ಷ ಇದೇ ಹೊತ್ತಿಗೆ ಗೆಳತಿ ಪ್ರೇರಣ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಧ್ರುವ, ಇದೀಗ ಸಪ್ತಪದಿ ತುಳಿಯಲು ಸಿದ್ದರಾಗಿದ್ದಾರೆ.

ಈ ನಡುವೆ ಧ್ರುವ-ಪ್ರೇರಣಾ ಅದ್ಧೂರಿ ಕಲ್ಯಾಣೋತ್ಸವ ಇದೇ ನವೆಂಬರ್ ೨೪ಕ್ಕೆ ನೇರವೇರಲಿದೆ. ಬೆಂಗಳೂರಿನ ಸಂಸ್ಕೃತಿ ಕನ್ವೆಷನ್ ಹಾಲ್‌ನಲ್ಲಿ ಇಬ್ಬರು ಮದುವೆಗೆ ಸಾಕ್ಷಿಯಾಗಲಿದೆ. ನವೆಂಬರ್ ೨೪ರ ಭಾನುವಾರ ಬೆಳ್ಳಿಗೆ ೦೭.೧೫ಕ್ಕೆರಿಂದ ೦೭.೪೫ರವರೆಗೆ ಶುಭ ವೃಶ್ಚಿಕ ಲಗ್ನದಲ್ಲಿ ಧ್ರುವ ಹಾಗೂ ಪ್ರೇರಣಾ ಹೊಸ ಬದುಕಿಗೆ ಕಾಲಿಡಲಿದ್ದಾರೆ. ಅಂದು ಸಂಜೆ ೭.೩೦ಕ್ಕೆ ಭರ್ಜರಿಯಾಗಿ ಅರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಈಗಾಗಲೇ ಈ ಜೋಡಿಯ ಆಮಂತ್ರಣ ಪತ್ರಿಕೆ ಪುಲ್ ವೈರಲ್ ಆಗಿದ್ದು, ಈ ಆಮಂತ್ರಣ ಪತ್ರಿಕೆಯಲ್ಲಿ ಎರಡನೇ ಪುಟ ತೆಗೆದ್ರೆ ಕರ್ನಾಟಕದ ಐತಿಹಾಸಿಕ ಸ್ಥಳದಲ್ಲಿ ಮಾಡಲಾದ ಧ್ರುವ ಹಾಗೂ ಪ್ರೇರಣಾ ಅವರ ಪ್ರಿ -ವೆಡ್ಡಿಂಗ್ ಫೋಟೋಶೂಟ್ ರಾರಾಜಿಸುತ್ತಿದೆ. ಈ ವೆಡ್ಡಿಂಗ್ ಕಾರ್ಡ್ ನೋಡಿ ಥ್ರಿಲ್ ಆದ ಅಭಿಮಾನಿಗಳು, ಧ್ರುವಸರ್ಜಾನಿಗೆ ಶುಭಶಯ ಕೋರಿದ್ದಾರೆ.

 

Leave a Comment