ಧೋನಿ ರನೌಟ್ ಗೆಲುವಿನ ಟರ್ನಿಂಗ್ ಪಾಯಿಂಟ್: ಟೇಲರ್

ಮ್ಯಾಂಚೆಸ್ಟರ್, ಜು ೧೧- ಟೀಂ ಇಂಡಿಯಾದ ಮಹೇಂದ್ರ ಸಿಂಗ್ ಧೋನಿ ರನೌಟ್ ಆಗಿದ್ದು ಪಂದ್ಯದ ಗೆಲುವಿಗೆ ಟರ್ನಿಂಗ್ ಸಿಕ್ಕಿತ್ತು ಎಂದು ನ್ಯೂಜಿಲೆಂಡ್‌ನ ರಾಸ್ ಟೇಲರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸೆಮಿಫೈನಲ್ ಪಂದ್ಯದಲ್ಲಿ ವಿಶೇಷವಾಗಿ ಧೋನಿ ರನೌಟ್ ಆಗಿದ್ದು ನಮ್ಮ ಗೆಲುವಿಗೆ ಪ್ರಮುಖ ಕಾರಣ. ಏಕೆಂದರೆ,  ಧೋನಿ ಈ ಹಿಂದೆ ಹಲವು ಪಂದ್ಯಗಳಲ್ಲಿ ಇಂಥ ಸನ್ನಿವೇಶಗಳಲ್ಲಿ ಭಾರತಕ್ಕೆ ಗೆಲುವು  ತಂದುಕೊಟ್ಟಿದ್ದಾರೆ. ಒಂದು ವೇಳೆ ಅವರು ಕೊನೆಯ ಎಸೆತದವರೆಗೂ ಕ್ರೀಸ್‌ನಲ್ಲಿ  ಉಳಿದಿದ್ದರೆ ಭಾರತ ಖಂಡಿತ ಜಯ ಸಾಧಿಸುತ್ತಿತ್ತು. ನಮ್ಮ ತಂಡ ಫೈನಲ್ ತಲುಪಿರುವುದು  ಅತ್ಯಂತ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಬುಧವಾರ ಬೆಳಗ್ಗೆ ೩ ಗಂಟೆಗೆ ಎಚ್ಚರವಾಗಿದ್ದೆ. ನಾನು ಯಾವ ರೀತಿ ಬ್ಯಾಟಿಂಗ್ ಮಾಡಿದೆ ಎಂದು ಗೊತ್ತಿರಲಿಲ್ಲ. ಟೆಸ್ಟ್ ಪಂದ್ಯದ ರೀತಿ ಭಾವನೆ ಉಂಟಾಗಿತ್ತು. ಅಜೇಯರಾಗಿ ಉಳಿದು ರಾತ್ರಿಯಿಡೀ ಪಂದ್ಯದ ಗುಂಗಿನಲ್ಲೇ ಮುಳುಗಿದ್ದೆ. ಇದು ಟೆಸ್ಟ್ ಪಂದ್ಯದ ಭಾವನೆ ಉಂಟುಮಾಡಿತ್ತು ಎಂದು ಹೇಳಿದರು. ಭಾರತದ ಅಗ್ರ ಮೂವರು ಬ್ಯಾಟ್ಸ್‌ಮ್ಯಾನ್‌ಗಳನ್ನು ನಮ್ಮ ಬೌಲರ್‌ಗಳು ಔಟ್  ಮಾಡಿದಾಗ ಪಂದ್ಯಕ್ಕೆ ಪ್ರಾಮುಖ್ಯತೆ ಸಿಕ್ಕಿತು. ಆದರೂ. ೯೨ ರನ್ ಬಳಿಕ ಜತೆಯಾದ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಜೋಡಿಯು ತೀವ್ರ ಒತ್ತಡದಲ್ಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ವೇಳೆ ರವೀಂದ್ರ ಜಡೇಜಾ ಅವರ ಕ್ಯಾಚ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರನ್ನು ರನೌಟ್ ಮಾಡಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್ ಎಂದು ಟೇಲರ್ ಹೇಳಿದ್ದಾರೆ.

ವಿಲಿಯಮ್ಸನ್ ಮನವಿ

ಭಾರತೀಯ ಅಭಿಮಾನಿಗಳು ಐಸಿಸಿ ವಿಶ್ವಕಪ್ ಫೈನಲ್ ಪಂದ್ಯಕ್ಕೆ ನಮಗೆ ಬೆಂಬಲ ನೀಡಲಿದ್ದಾರೆಂಬ ನಂಬಿಕೆ ಇದೆ ಎಂದು ನಾಯಕ ಕೇನ್ ವಿಲಿಯಮ್ಸನ್ ವಿಶ್ವಾಸ ವ್ಯಕ್ತಪಡಿಸಿದರು. ವಿರಾಟ್ ಕೊಹ್ಲಿ ಪಡೆಯ ರೀತಿ ನಾವು ಕೂಡ ದೇಶವನ್ನು ಪ್ರತಿನಿಧಿಸುತ್ತಿದ್ದೇವೆ. ಸೋಲು-ಗೆಲುವು ಕ್ರೀಡೆಯ ಒಂದು ಭಾಗ. ಕ್ರೀಡಾಸ್ಫೂರ್ತಿಯಿಂದ ನಾವು ಆಡಬೇಕಾಗುತ್ತದೆ. ಹಾಗಾಗಿ, ಭಾರತೀಯ ಅಭಿಮಾನಿಗಳು ಕೋಪಗೊಳಗಾಗುವುದಿಲ್ಲ ಎಂದು ಭಾವಿಸಿದ್ದೇನೆ ಎಂದು ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಏಕದಿನ ಹಾಗೂ ಟಿ-೨೦ ಕ್ರಿಕೆಟ್ ಯಾವಾಗಲೂ ಚಂಚಲತೆಯಿಂದ ಕೂಡಿರುತ್ತದೆ. ಹಾಗಾಗಿ, ಸೋಲು-ಗೆಲುವುಗಳನ್ನು ಸಮಾನ ಮನಸ್ಸಿನಿಂದ ಒಪ್ಪಿಕೊಳ್ಳಬೇಕು ಎಂದು ಹೇಳಿದರು.

Leave a Comment