ಧೋನಿ ಅತ್ಯಂತ ಅಪಾಯಕಾರಿ ಸೆಲೆಬ್ರಿಟಿ

ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕೂಲ್ ಕ್ಯಾಪ್ಟನ್ ಎಂದೇ ಹೆಸರುವಾಸಿಯಾಗಿರುವ ಮಹೇಂದ್ರ ಸಿಂಗ್ ಧೋನಿ ಅತ್ಯಂತ ಅಪಾಯಕಾರಿ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅರೇ ಏನು ಇದು ಧೋನಿ ನಮ್ಮೆಲ್ಲಾ ಅಚ್ಚುಮೆಚ್ಚು ಹೇಗೆ ಅಪಾಯಕಾರಿ ಎಂದು ನಿಮ್ಮನ್ನು ಕಾಡುವುದು ನಿಜ. ಆದರೆ ಅವರನ್ನು ಹೆಚ್ಚು ಹುಡುಕಾಡಿದವರಿಗೆ ವೈರಸ್ ಕಾಟ ಕೂಡ ಹೆಚ್ಚಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಧೋನಿ ಏನೇ ಮಾಡಿದ್ದರೂ ಜನರು ಅವರ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಹಾಗಾಗಿ ಸರ್ಚ್ ಎಂಜಿನ್‌ನಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಬಗ್ಗೆ ಯಾವುದೇ ಮಾಹಿತಿಯನ್ನು ಹುಡುಕಿದರೆ ಅದರ ಜೊತೆಗೆ, ಅಪಾಯಕಾರಿ ವೈರಸ್ ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ಸೇರಿಕೊಳ್ಳುತ್ತದೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ,

ಈ ಬಗ್ಗೆ ಮ್ಯಾ ಕಫೆ ಕಂಪನಿ ಮಾಹಿತಿ ನೀಡಿದೆ. ’ಮೋಸ್ಟ್ ಡೇಂಜರಸ್ ಸೆಲೆಬ್ರಿಟಿ ೨೦೧೯’ ಪಟ್ಟಿಯಲ್ಲಿ ಧೋನಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮ್ಯಾ ಕಫೆ ತನ್ನ ೧೩ ನೇ ಆವೃತ್ತಿಯಲ್ಲಿನ ಸಂಶೋಧನೆಯು ಜನಪ್ರಿಯ ಸೆಲೆಬ್ರಿಟಿಗಳನ್ನು ಪಟ್ಟಿ ಮಾಡಿದೆ.

ಧೋನಿ ಅಭಿಮಾನಿಗಳು ದೇಶ ಮತ್ತು ವಿದೇಶಗಳಲ್ಲಿದ್ದಾರೆ. ಅವರು ಧೋನಿಗೆ ಸಂಬಂಧಿಸಿದ ಮಾಹಿತಿಯನ್ನು ಸರ್ಚ್ ಎಂಜಿನ್‌ನಲ್ಲಿ ಹುಡುಕುತ್ತಲೇ ಇರುತ್ತಾರೆ. ಧೋನಿ ಬಗ್ಗೆ ಹೆಚ್ಚಿನದನ್ನು ಅರಿಯಲು ಜನರು ಡೌನ್ ಲೋಡ್ ಸಹ ಮಾಡುತ್ತಾರೆ ಇದರಿಂದ ಗ್ರಾಹಕರ ಅಮೂಲ್ಯ ಮಾಹಿತಿ ಬೇರೆಯವರಿಗೆ ಲಭ್ಯವಾಗುತ್ತದೆ. ಜನಪ್ರಿಯತೆಯ ದೃಷ್ಟಿಯಿಂದ ೨೦೧೧ ರ ವಿಶ್ವಕಪ್ ವಿಜೇತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರಿಗಿಂತ ಮುಂದಿದ್ದಾರೆ. ಇದು ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಟಿ -೨೦ ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಇತರ ಪ್ರಸಿದ್ಧ ವ್ಯಕ್ತಿಗಳಲ್ಲಿ ರಿಯಾಲಿಟಿ ಟಿವಿ ಕಾರ್ಯಕ್ರಮದ ವಿಜೇತ ಗೌತಮ್ ಗುಲಾಟಿ, ಬಾಲಿವುಡ್ ನಟಿ ಸನ್ನಿ ಲಿಯೋನ್ ನಂತರದ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ಆರನೇ ಸ್ಥಾನ ರಾಧಿಕಾ ಆಪ್ಟೆ, ಏಳನೇ ಸ್ಥಾನ ಶ್ರದ್ಧಾ ಕಪೂರ್, ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಧೋನಿ ಜನಪ್ರಿಯತೆಗೆ ಧಕ್ಕೆ

ಧೋನಿ ಅವರ ಅಪಾರ ಜನಪ್ರಿಯತೆಯನ್ನು ಸೈಬರ್ ಅಪರಾಧಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಗ್ರಾಹಕರನ್ನು ಸೆಳೆಯುವ ದುರುದ್ದೇಶದಿಂದ ವೆಬ್‌ಸೈಟ್‌ಗಳಿಗೆ ಆಮಿಷವೊಡ್ಡಲು ಒಂದು ಅಸ್ತ್ರವನ್ನಾಗಿ ಧೋನಿ ಅವರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ಮಾಲ್‌ವೇರ್‌ಅನ್ನು ಸ್ಥಾಪಿಸಬಹುದು ಅಥವಾ ವೈಯಕ್ತಿಕ ಮಾಹಿತಿ ಮತ್ತು ಪಾಸ್‌ವರ್ಡ್‌ಗಳನ್ನು ಕದಿಯಬಹುದು. ಇದನ್ನು ತಡೆಯುವುದಕ್ಕೆ ಜನರು ಕಾನೂನು ಬಾಹಿರ ಸೈಟ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಇಂಟರ್‌ನೆಟ್‌ನಲ್ಲಿ ಜನರು ಉಚಿತ ವಸ್ತುವಿಷಯಕ್ಕಾಗಿ ಹೆಚ್ಚು ಹುಡುಕುತ್ತಾರೆ. ಇದಕ್ಕಾಗಿ ಭದ್ರತೆಯಲ್ಲಿ ರಾಜಿಯಾಗುವ ಜನರ ಈ ದೌರ್ಬಲ್ಯವನ್ನು ಸೈಬರ್ ಅಪರಾಧಿಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ. ಕ್ಲಿಕ್ ಮಾಡುವ ಮುನ್ನ ಜನರು ಈ ಅಪಾಯಗಳನ್ನು ಗುರುತಿಸುವುದು ಅಗತ್ಯ. ಜೊತೆಗೆ ಉಚಿತ ವಸ್ತು ವಿಷಯದ ಆಮಿಷವೊಡ್ಡುವ ಶಂಕಾಸ್ಪದ ಲಿಂಕ್‌ಗಳಿಂದ ದೂರವಿರಬೇಕು. ಮ್ಯಾಕಫಿಯ ಸಮಗ್ರ ಭದ್ರತಾ ಪರಿಹಾರ McAfee Total Protection ಅಳವಡಿಸಿಕೊಳ್ಳಬೇಕು. ಉಚಿತವಾಗಿ ಲಭ್ಯವಿರುವ ಮ್ಯಾಕಫಿಯ McAfee WebAdvisor ಯ ಅಪಾಯಕಾರಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಮ್ಯಾಕಫಿ ಬಗ್ಗೆ ಹೆಚ್ಚಿನ ವಿವರಗಳಿಗೆwww.mcafee.com ರಲ್ಲಿ ಸಂದರ್ಶಿಸಿ.

ವೆಂಕಟ್ ಕೃಷ್ಣಾಪುರ್

ವ್ಯವಸ್ಥಾಪಕ ನಿರ್ದೇಶಕ

ಮ್ಯಾಕಫಿ ಇಂಡಿಯಾ

Leave a Comment