ಧೋನಿಯಿಲ್ಲದ ಭಾರತದ ಟಿ-20 ತಂಡ ಕೊಹ್ಲಿಗೆ ವಿಶ್ರಾಂತಿ

ಕೋಲ್ಕತ್ತಾ, ನ.೩- ನಾಳೆಯಿಂದ ವೆಸ್ಟ್ ಇಂಡೀಸ್ ವಿರುದ್ಧ ಆರಂಭವಾಗಲಿರುವ ಟಿ-20 ಸರಣಿಗೆ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ. ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ತಂಡದ ಸಾರಥ್ಯವನ್ನು ಸ್ಫೋಟಕ ಬ್ಯಾಟ್ಸ್ ಮೆನ್ ರೋಹಿತ್ ಶರ್ಮಾ ಅವರಿಗೆ ಆಯ್ಕೆ ಸಮಿತಿ ನೀಡಿದೆ.
ಇದೇ ವೇಳೆ ಮಹೇಂದ್ರ ಸಿಂಗ್ ಧೋನಿ ಅವರನ್ನು ಟಿ-20 ತಂಡದಿಂದ ಕೈಬಿಡಲಾಗಿದೆ. ಆದರೆ ಇದು ಧೋನಿ ಅವರ ಪಾಲಿಗೆ ಟಿ-20 ಕ್ರಿಕೆಟ್ ಮುಗಿದ ಅಧ್ಯಾಯವಲ್ಲವೆಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಹೇಳಿದ್ದಾರೆ.
ಧೋನಿ ಅವರು ಭಾರತೀಯ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವೆಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. 2 ವಿಶ್ವ ಕಪ್ ನಲ್ಲಿ ನಾಯಕನಾಗಿ ಗೆಲುವು ತಂದುಕೊಟ್ಟ ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿತ್ತು.
ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಹಾಗೂ ಏಕ ದಿನ ಸರಣಿಯನ್ನು ಭಾರತ ಗೆದ್ದು ಕೊಂಡಿದೆ. ಈಗ ನಾಳೆಯಿಂದ ಆರಂಭವಾಗಲಿರುವ ಟಿ-20 ಕ್ರಿಕೆಟ್ ಸರಣಿಯನ್ನು ಭಾರತ ತನ್ನದಾಗಿಸಿಕೊಳ್ಳುವ ತವಕದಲ್ಲಿದೆ.
ತಂಡ ಇಂತಿದೆ. ರೋಹಿತ್ ಶರ್ಮಾ (ನಾಯಕ) ಶಿಖರ್ ಧವನ್, ಕೆ.ಎಲ್.ರಾಹುಲ್, ದಿನೇಶ್ ಕಾರ್ತಿಕ್, ಮನೀಶ್ ಪಾಂಡೆ, ಶ್ರೇಯಸ್ ಐಯರ್, ರಿಷಬ್ ಪಂತ್, (ವಿಕೆಟ್ ಕಿಫರ್) ಕ್ರುನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಭುವನೇಶ್ವರ ಕುಮಾರ್, ಜಸ್ಪ್ರೀಸ್ ಬುಮ್ರಾ, ಖಲೀಲ್ ಅಹಮದ್, ಉಮೇಶ್ ಯಾದವ್ ಮತ್ತು ಶಹಬಾಸ್ ನದೀಮ್.

Leave a Comment