ಧೂಳಿನ ಅಲರ್ಜಿ ಮನೆಮದ್ದು

ಧೂಳಿನ ಕಣಗಳಿಂದ ಉಂಟಾಗುವ ಅಲರ್ಜಿ ಇತ್ತೀಚೆಗೆ ಎಲ್ಲೆಡೆ ಅಪಾಯಕಾರಿ ಮಟ್ಟವನ್ನು ತಲುಪುತ್ತಿದೆ. ಪರಿಸರ ನಾಶ, ವಾಹನಗಳ ಬಳಕೆ ಹೆಚ್ಚಳ, ರಾಸಾನಿಕಗಳ ಬಳಕೆ, ಕಾರ್ಖಾನೆಗಳ ಹೊಗೆ ಹೀಗೆ ಹತ್ತು ಹಲವು ಕಾರಣಗಳಿಂದಾಗಿ ವಾತಾವರಣದಲ್ಲಿ ಅಪಾರ ಪ್ರಮಾಣದ ಧೂಳು ಹೆಚ್ಚುತ್ತಿದೆ. ಅದರಲ್ಲೂ ಮನೆಗಳಲ್ಲಿ ಸಹ ಜಿರಳೆಗಳು, ಸ್ಪೈಡರ್, ಮೋಲ್ಡ, ಯೀಸ್ಟ್ ನಂಥ ಫಂಗಸ್ ಗಳು, ಪ್ರಾಣಿ -ಪಕ್ಷಿಗಳ ಕೂದಲು ಸಹ ಅಪಾಯಕಾರಿ ಧೂಳನ್ನು ಉತ್ಪತ್ತಿಮಾಡುತ್ತದೆ.

ಈ ಧೂಳಿನಿಂದ ಉಂಟಾಗುವ ಅಲರ್ಜಿಯಿಂದಾಗಿ ನಿರಂತವಾಗಿ ಕಾಡುವ ನೆಗಡಿ, ತ್ವಚೆಯ ಮೇಲೆ ಹೆಚ್ಚಾಗುವ ಕೆರೆತ, ಉಸಿರಾಟದ ಸಮಸ್ಯೆ, ಎದೆಯ ಬಿಗಿತ ಸೇರಿದಂತೆ ಹಲವು ಹೊಸ-ಹೊಸಸಮಸ್ಯೆಗಳು ಎದುರಾಗುತ್ತಿದೆ. ಆದರೆ ಇಂಥಾ ಕೆಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಇಲ್ಲವೇ ಇಲ್ಲೆನ್ನಬಹುದು, ಹೆಚ್ಚೆಂದರೆ ನಾವು ನಮ್ಮ ಮನೆಯನ್ನು ಶುದ್ಧವಾಗಿಟ್ಟುಕೊಳ್ಳಬಹುದಷ್ಟೇ ಇಡೀ ವಾತಾವರಣ ಧೂಳನ್ನು ತಡೆಯುವುದು ಅಸಾಧ್ಯ. ಈ ಕಾಣದಿಂದಲೇ ಕೆಲವು ಮನೆಮದ್ದುಗಳು ಧೂಳಿನಿಂದ ಹರಡಬಹುದಾದ ಅಪಾಯಕಾರಿ ಸಮಸ್ಯೆಗಳನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

.ಯಾವುದೇ ರೀತಿಯ ಕಲಬೆರಕೆ ಇಲ್ಲದ ನೈಸರ್ಗಿಕ ಜೇನುತುಪ್ಪವನ್ನು ನಿತ್ಯ ಎರಡು ಚಮಚವನ್ನು ಎರಡು ಬಾರಿಯಂತೆ ಸೇವಿಸಿ. ಜೇನುತುಪ್ಪದಲ್ಲಿ ಪಾಲೆನ್ (ಪುಷ್ಪಧೂಳಿ) ಎಂಬ ಕಣಗಳು ಜೇನುತುಪ್ಪದಲ್ಲಿರುವ ಪಾಲೆನ್ ನಮ್ಮ ದೇಹವು ಧೂಳಿಗೆ ಶೀಘ್ರ ಪ್ರತಿಕ್ರಿಯಿಸುವುದನ್ನು ಹಾಗೂ ನಮ್ಮ ದೇಹ ಸೂಕ್ಷ್ಮವಾಗುವುದನ್ನು ಸಹ ತಡೆಯುತ್ತದೆ.

ಆಪ್ ಸೈಡ್ ವಿನಿಗರ್ ಅಪಾಯಕಾರಿ ಧೂಳಿನ ದೇಹವನ್ನು ರಕ್ಷಿಸುವಲ್ಲಿ ಪರಿಣಾಮಕಾರಿ ಕಾರ್ಯವನ್ನು ನಿರ್ವಹಿಸ ಅತ್ಯುತ್ತಮ ಮನೆಮದ್ದಾಗಿದೆ.

ಎರಡು ಚಮಚ ಆ?ಯಪಲ್ ಸೈಡ್ ವಿನಿಗರ್ ಅನ್ನು ಒಂದು ಲೋಟ ನೀರಿಗೆ ಹಾಕಿ ಅಗತ್ಯವಿದ್ದರೆ ರುಚಿಗೆ ಒಂದು ಚಮಚ ಜೇನುತುಪ್ಪವನ್ನು ಹಾಕಿ ಮಿಶ್ರಣ ಮಾಡಿ ಕುಡಿಯಿರಿ. ನಿತ್ಯ ಎರಡರಿಂದ ಮೂರು ಬಾರಿ ಈ ಮಿಶ್ರಣವನ್ನು ಸೇವಿಸಿ.

ಆ?ಯಪಲ್ ಸೈಡ್ ವಿನಿಗರ್ ನಲ್ಲಿರುವ ಉರಿಯೂತ ನಿವಾರಕ ಅಂಶ ಹಾಗೂ ಇತರ ಅಂಶಗಳು ದೇಹಕ್ಕೆ ಎದುರಾಗುವ ಅಲರ್ಜಿಯನ್ನು ನಿವಾರಿಸುತ್ತದೆ ಹಾಗೂ ಶೀತ ಬರುವುದನ್ನು ತಡೆಯುತ್ತದೆ. ಅಲ್ಲದೇ ಅಲರ್ಜಿ ಹೆಚ್ಚುವುದನ್ನು ಸಹ ಇದು ತಡೆಯುತ್ತದೆ.

ಅರಿಶಿನ ರೋಗನಿರೋಧಕ ಗುಣ ಹಾಗೂ ಉರಿಯೂತವನ್ನು ಕಡಿಮೆ ಮಾಡುವ ಗುಣ ಇರುವುದರಿಂದ ಇದು ಅತ್ಯುತ್ತಮ ಹಲವು ಕಾಯಿಲೆಗಳಿಗೆ ಅತ್ಯುತ್ತಮ ಮನೆಮದ್ದಾಗಿದೆ. ಒಂದು ಲೋಟ ಹಾಲಿಗೆ ಅರಿಶಿನ, ಮೆಣಸು ಹಾಕಿ ಚೆನ್ನಾಗಿ ಕುದಿಸಿ ನಂತರ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿ. ಹಾಲು ತಣ್ಣಗಾದ ನಂತರ ಕುಡಿಯಿರಿ. ಇದನ್ನು ನಿತ್ಯ ಎರಡು ಬಾರಿ ಕುಡಿಯುವುದರಿಂದ ಅಲರ್ಜಿ ಬರದಂತೆ ಹಾಗೂ ಬಂದರೂ ಸೋಂಕಿಗೆ ಬದಲಾಗದಂತೆ ತಡೆಯುತ್ತದೆ
ಅಲೋವೆರಾದಲ್ಲಿ ನೈಸರ್ಗಿಕ ರೋಗ ನಿರೋಧಕ ಹಾಗೂ ಉರಿಯೂತ ಶಮನ ಮಾಡುವ ಅಂಶವನ್ನು ಹೊಂದಿರುವುದರಿಂದ ಇದು ಅಲರ್ಜಿಗೆ ಅತ್ಯುಪಕಾರಿ ಮನೆಮದ್ದು. ನಿತ್ಯ ಎರಡು ಹೊತ್ತು ಕಾಲು ಲೋಟ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಅಲರ್ಜಿ ಬರುವುದನ್ನು ತಡೆಗಟ್ಟುತ್ತದೆ ಅಲ್ಲದೆ, ಅಲರ್ಜಿ ಉಂಟಾದಾಗ ತ್ವಚೆ ಊದುವುದು ಅಥವಾ ನೋವನ್ನು ಸಹ ನಿವಾರಿಸುತ್ತದೆ.

ವಿಟಮಿನ್ ಸಿ ಹೆಚ್ಚು ಪ್ರಖ್ಯಾತಿ ಪಡೆದಿರುವುದೇ ರೋಗನಿರೋಧಕ ಶಕ್ತಿಯಿಂದಾಗಿ. ಇನ್ನು ಕಾಲಮಾನದ ಅಲರ್ಜಿ ಅಥವಾ ಧೂಳಿನ ಸಮಸ್ಯೆ ಉಂಟಾದರಂತೂ ವಿಟಮಿನ್ ಸಿ ಪೋಷಕಾಂಶ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತದೆ. ನಿತ್ಯ ಅದಾಂಜು ೫೦೦ ಮಿಲಿ ಗ್ರಾಂನಿಂದ ೧೦೦೦ ಮಿಲಿ ಗ್ರಾಮ್‌ನಷ್ಟು ಸೇವಿಸಿದರೆ ಯಾವುದೇ ಸಂಶಯ ಇಲ್ಲದೇ ನಿಮ್ಮ ಆರೋಗ್ಯ ಸಹ ಉತ್ತಮವಾಗಿರುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಅಲ್ಲದೇ ಅಲರ್ಜಿಗಳಿಂದ ದೇಹವನ್ನು ರಕ್ಷಿಸುತ್ತದೆ.

ಪುದೀನ ಎಲೆ ಸಹ ಉರಿಯೂತ ಶಮನಕಾರಿ ಹಾಗೂ ರಕ್ತ ಅಥವಾ ದೇಹ ಹೆಪ್ಪುಗಟ್ಟಿವಿಕೆಗೆ ಪುದೀನಾ ಅವಕಾಶ ನೀಡುವುದಿಲ್ಲ. ಪುದೀನಾ ಎಲೆಯಲ್ಲಿ ವೊಲಾಟೈಲ್ ಅಂದರೆ ಮೆಂತಾಲ್ ಎಂಬ ಎಣ್ಣೆ ಇದ್ದು ಇದು ನೈಸರ್ಗಿಕವಾಗಿ ಹೆಪ್ಪುಗಟ್ಟಿವಿಕೆ ಹಾಗೂ ಸೈನಸ್ ಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಅಲ್ಲದೇ ಶೀತ, ಕೆಮ್ಮಿಗೂ ಅತ್ಯುತ್ತಮ ಮನೆಮದ್ದು. ಒಂದು ಲೋಟ ಬಿಸಿ ನೀರಿಗೆ ಚಮಚ ಒಣಗಿರುವ ಪುದೀನಾ ಎಲೆ ಹಾಗೂ ಒಂದು ಚಮಚ ಜೇನು ತುಪ್ಪವನ್ನು ಹಾಕಿದ ಟೀ ಅನ್ನು ನಿತ್ಯ ಕನಿಷ್ಠ ಮೂರು ಬಾರಿ ಸೇವಿಸಿದರೆ ಅಲರ್ಜಿ ನಿಮ್ಮ ದೇಹವನ್ನು ತಾಗಲು ಬಿಡುವುದಿಲ್ಲ.

ಅಲರ್ಜಿಯಿಂದಾಗಿ ನಿಮಗೆ ನಿರಂತರವಾಗಿ ಸೀನುವ ಸಮಸ್ಯೆ ಎದುರಾಗಿದ್ದರೆ ತುಪ್ಪ ಬಳಸಿ. ಕಾಲು ಚಮಚ ತುಪ್ಪವನ್ನು ಹಾಗೇ ಅಥವಾ ರುಚಿಗಾಗಿ ಬೆಲ್ಲವನ್ನು ಸೇರಿಸಿ ತಿನ್ನುವ ಮೂಲಕ ಸೀನುವ ಸಮಸ್ಯೆ ತತ್ ಕ್ಷಣವೇ ನಿವಾರಣೆಯಾಗುತ್ತದೆ. ತುಪ್ಪವು ನಿಮ್ಮ ಮೂಗನ್ನು ಬೆಚ್ಚಗಿರುತ್ತದೆ ಹಾಗೂ ಸತತ ಸೀನನ್ನು ತಡೆಯುತ್ತದೆ. ತುಪ್ಪವನ್ನು ಧೂಳಿನ ಅಲರ್ಜಿಗೆ ಅತ್ಯಂತ ತುರ್ತು ಶಮನಕಾರಿ ಮನೆಮದ್ದಾಗಿ ಹೆಚ್ಚು ಬಳಸುತ್ತಾರೆ.

Leave a Comment