ಧೂಮಪಾನಿಗಳಿಗೆ `ಮಿಟಮಿನ್ – ಇ’ ಮಾತ್ರೆ

`ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ’ ಎಂದು ಸಿಗರೇಟ್ ಪ್ಯಾಕ್ ಮೇಲೆ ಮುದ್ರಿಸಲಾಗಿದೆ. ಈ ಚಟದಿಂದ ಮುಕ್ತರಾಗುವುದು ಒಳ್ಳೆಯದು. ಇಲ್ಲದಿದ್ದರೆ ಭವಿಷ್ಯದಲ್ಲಿ ತೊಂದರೆಗೆ ಸಿಲುಕಬಹುದು.
ಧೂಮಪಾನ ಮಾಡುವುದರಿಂದ ಧೂಮಪಾನಿಗಳಿಗಷ್ಟೆ ಅಲ್ಲ, ಸುತ್ತಲಿನ ಜನಕ್ಕೆ, ಪರಿಸರಕ್ಕೂ ಕಂಟಕ. ಈ ಧೂಮಪಾನ ಚಟ ಆರೋಗ್ಯ, ಸಾಮಾಜಿಕ ಬದುಕು, ಎಲ್ಲದರ ಮೇಲೂ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಧೂಮಪಾನ ಬಿಡುವುದೇ ಒಳ್ಳೆಯದು.
ಧೂಮಪಾನದಿಂದ ಹೃದಯದ ಕಾಯಿಲೆ, ಶ್ವಾಸಕೋಶ ಕ್ಯಾನ್ಸರ್ ಬರಬಹುದು. ಹಾಗಾಗಿ ಧೂಮಪಾನದಿಂದ ದೂರ ಇರುವುದೇ ಒಳ್ಳೆಯದು. ಧೂಮಪಾನ ಚಟಕ್ಕೆ ಒಳಗಾಗಿ ಅದನ್ನು ಬಿಟ್ಟ ನಂತರ ಮಿಟಮಿನ್ ಇ ಮಾತ್ರೆಗಳನ್ನು ಸೇವಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ಮಾಡಿದ್ದಾರೆ.
ಧೂಮಪಾನಿಗಳು ಧೂಮಪಾನ ಬಿಟ್ಟ ನಂತರ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಿಟಮಿನ್ – ಇ ಮಾತ್ರೆ ನೆರವಾಗುತ್ತದೆ.
ಧೂಮಪಾನಿಗಳು ಈ ಮಿಟಮಿನ್ ಇ ಮಾತ್ರೆ ಸೇವಿಸಿದರೆ, ಧೂಮಪಾನದಿಂದ ಹೃದಯಕ್ಕೆ ಆಗುವ ತೊಂದರೆಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಸಂಶೋಧನಾ ವರದಿಗಳು ಹೇಳಿವೆ.
ಮಿಟಮಿನ್ ಇ ಮಾತ್ರೆ ಸೇವನೆಯಿಂದ ಹೃದಯಕ್ಕೆ ಯಾವುದೇ ತೊಂದರೆ ಉಂಟಾಗದು. ರಕ್ತ ಸಂಚಾರ ಸುಗಮವಾಗಿರುತ್ತದೆ ಎಂದು ಸಂಶೋಧನಾ ವರದಿಗಳು ಹೇಳಿವೆ.
ಮಿಟಮಿನ್ – ಇ ಮಾತ್ರೆ ಸೇವನೆಯಿಂದ ಧೂಮಪಾನಿಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಶೇ. 19 ರಷ್ಟು ಕಡಿಮೆಯಾಗುತ್ತವೆ. ಹಾಗಾಗಿ ಸಿಗರೇಟ್ ಬಿಟ್ಟವರು ಮಿಟಮಿನ್ ಇ ಮಾತ್ರೆ ಸೇವಿಸಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು.

Leave a Comment