ಧಾರಾವಾಹಿ ಚಿತ್ರೀಕರಣ ಆರಂಭ

ಬೆಂಗಳೂರು, ಮೇ ೨೫- ಕೊರೊನಾ ಲಾಕ್‌ ಡೌನ್‌ ನಿಂದ ಸ್ಥಗಿತಗೊಂಡಿದ್ದ ಬಹುತೇಕ ಧಾರಾವಾಹಿಗಳು ಇಂದಿನಿಂದ ಚಿತ್ರೀಕರಣ ಆರಂಭಿಸಿದೆ.

ಈ ಮೂಲಕ ಕೊರೊನಾ ಸಂಕಷ್ಟದಿಂದ ನಲುಗಿದ್ದ ಕನ್ನಡ ಕಿರುತೆರೆಯಲ್ಲಿ ಮತ್ತೆ ಚೇತರಿಸಿಕೊಳ್ಳುವ ಹಾದಿಯತ್ತ ಹೆಜ್ಜೆ ಹಾಕಿದೆ. ಕೊರೊನಾ ಹಿನ್ನೆಲೆಯಲ್ಲಿ ಮಾ 19 ರಿಂದ ಧಾರಾವಾಹಿ, ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿತ್ತು. ಅಂದಾಜು 120 ಧಾರಾವಾಹಿಗಳು ಚಿತ್ರೀಕರಣವನ್ನು ನಿಲ್ಲಿಸಿದ್ದವು.
ಇದೀಗ ಸರಕಾರದ ಮಾರ್ಗಸೂಚಿಯಂತೆ ಹೊಸ ಎಪಿಸೋಡ್‌ಗಳನ್ನು ಚಿತ್ರೀಕರಿಸಲಾಗಿದ್ದು, ಪ್ರತಿಯೊಬ್ಬರು ಸಾಮಾಜಿಕ ಅಂತರ ಪಾಲನೆ, ಮಾಸ್ಕ್‌ ಹಾಗೂ ಸ್ಯಾನಿಟೇಸರ್‌ ಬಳಸುವುದು ಕಡ್ಡಾಯವಾಗಿದೆ. ಇಂದು ಬೆಳಿಗ್ಗೆ ೭ಕ್ಕೆ ಶುರುವಾಗಿರುವ ಧಾರಾವಾಹಿ ಚಿತ್ರೀಕರಣ ಸಂಜೆ ೫ಕ್ಕೆವರೆಗೆ ನಡೆಯಲಿದೆ. ಜೊತೆಗೆ ಶೂಟಿಂಗ್ ಲೋಕೇಷನ್‍ಗಳಲ್ಲಿ 20ಕ್ಕಿಂತ ಅಧಿಕ ತಂತ್ರಜ್ಞರು, ಕಲಾವಿದರು ಸೇರದಂತೆ ಎಚ್ಚರಿಕೆ ವಹಿಸಬೇಕು.

da

ಅಲ್ಲದೇ ಪ್ರತಿ ಎರಡು ಗಂಟೆಗೊಮ್ಮೆ ಟೆಂಪರೇಚರ್ ಟೆಸ್ಟ್ ವರದಿಯನ್ನು ಚಾನಲ್‍ಗೆ ಹಾಗೂ ಪ್ರೊಡಕ್ಷನ್ ಕಂಪನಿಗೆ ಕಳುಹಿಸಬೇಕು ಎಂದು ಟೆಲಿವಿಷನ್ ಅಸೋಸಿಯೇಷನ್ ಸೂಚಿಸಿದೆ. ಮೇಕಪ್ ವಸ್ತುಗಳನ್ನ ಕಲಾವಿದರೇ ತರುವಂತೆ ಹೊಸ ರೂಲ್ಸ್ ಮಾಡಲಾಗಿದೆ. ಇಂದಿನಿಂದ ಹೊಸ ಎಪಿಸೋಡ್‌ಗಳನ್ನು ಚಿತ್ರೀಕರಿಸಿಕೊಂಡು ಮುಂದಿನ ಜೂನ್ 1ರಿಂದ  ಧಾರಾವಾಹಿಗಳ ಹೊಸ ಎಪಿಸೋಡ್ ಗಳು ಪ್ರಸಾರ ಮಾಡಲು ವಾಹಿನಿ ಸಿದ್ದವಾಗಿದೆ.

ಈಗಾಗಲೇ ಹೊಸಕಂತುಗಳ ಬಗ್ಗೆ ಪ್ರೋಮ್‌ ಪ್ರಸಾರ
ಧಾರಾವಾಹಿಗಳಿಂದ ಮನೆಮಾತಾಗಿದ್ದ ವಾಹಿನಿಗಳು ಇತ್ತೀಚೆಗೆ ಟಿಆರ್‌ಪಿಯಲ್ಲಿ ಏರುಪೇರಾಗಿ ಕಂಗಲಾಗಿದ್ದವು, ಎಷ್ಟೆ ಕಸರತ್ತು ಮಾಡಿದ್ದರು ಪ್ರೇಕ್ಷಕರನ್ನುತನ್ನತ್ತ ಸೆಳೆಯಲು ವಿಪಲವಾಗಿದ್ದವು. ಹಾಗಾಗಿ ಹೊಸ ಕಂತುಗಳ ಬಗ್ಗೆ ವಾಹಿನಿಗಳು ವಿಶೇಷ ಪ್ರೋಮ್‌ಗಳನ್ನು ಮಾಡಿಸಿ ಪ್ರಸಾರ ಮಾಡುವ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡಿವೆ.

ಚಿತ್ರೀಕರಣದ ಬಗ್ಗೆ ಫೇಸ್‌ ಬುಕ್‌ನಲ್ಲಿ ನೇರಪ್ರಸಾರ
 ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ತಂಡ ಫೇಸ್ ಬುಕ್ ಲೈವ್ ಮುಖಾಂತರ ತಾವು ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ವಿವರಿಸುವ ಮೂಲಕ ಗಮನ ಸೆಳೆದಿದೆ. ನಿರ್ದೇಶಕರಿಂದ ಹಿಡಿದು ಎಲ್ಲಾ ತಂತ್ರಜ್ಞರು ಮಾಸ್ಕ್, ಗ್ಲೌಸ್, ಗಾರ್ಡ್ ಹಾಕಿ ಶೂಟಿಂಗ್ ಮಾಡುತ್ತಿದ್ದಾರೆ. ಕಲಾವಿದರು ಸೆಟ್ ಗೆ ಬರುವಾಗಲೇ ಸ್ಯಾನಿಟೈಸ್ ಮಾಡಲಾಗಿದ್ದು, ಕಲಾವಿದರು ಕೂರುವ ಪೀಠೋಪಕರಣಗಳು, ಶೂಟಿಂಗ್ ನಡೆಯುವ ಸ್ಥಳದ ಮೂಲೆ ಮೂಲೆಗಳಲ್ಲೂ ಸ್ಯಾನಿಟೈಸ್ ಮಾಡಲಾಗಿದೆ. ಇನ್ನು, ಮೇಕಪ್ ಮ್ಯಾನ್ ಕೂಡಾ ಕೈಯಿಂದ ಟಚ್ ಮಾಡದೇ ಬ್ರಷ್ ಬಳಸಿ ಎಚ್ಚರಿಕೆಯಿಂದ ಮೇಕಪ್ ಮಾಡುತ್ತಿದ್ದಾರೆ. ಇದರ ಜತೆಗೆ ಧಾರವಾಹಿಯಲ್ಲೂ ಕೊರೋನಾ ಬಗ್ಗೆ ಜಾಗೃತಿ ಸಂದೇಶ ನೀಡಲಾಗುವುದು ಎಂದು ನಟ ಅನಿರುದ್ಧ್ ಹೇಳಿದ್ದಾರೆ.

Share

Leave a Comment