ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ

 

ಬೆಂಗಳೂರು, ಮೇ.5- ಕಳೆದ ಹಲವು ದಿನಗಳಿಂ‌ದ ನಿಂತು ಹೋಗಿದ್ದ ಧಾರಾವಾಹಿ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಆದರೆ ಸಿನಿಮಾ ಚಿತ್ರೀಕರಣಕ್ಕೆ ಇನ್ನೂ ಹಸಿರು ನಿಶಾನೆ ತೋರಿಲ್ಲ.
ಧಾರಾವಾಹಿಗಳು ಹೊರಾಂಗಣದ ಬದಲು ಒಳಾಂಗಣದಲ್ಲಿ ಚಿತ್ರೀಕರಣಕ್ಕೆ ಅನಮತಿ ಕಲ್ಪಿಸಲಾಗಿದೆ.
ಲಾಕ್ ಡೌನ್ ಜಾರಿಯಾದ ಬಳಿಕ ಸಿನಿಮಾ ಧಾರಾವಾಹಿ ಚಿತ್ರೀಕರಣ ನಿಲ್ಲಿಸಲಾಗಿತ್ತು.
ಇದರಿಂದ ಹಲವು ವಾಹಿನಿಗಳು ಹಳೆಯ ಎಪಿಸೋಡು ಮರು ಪ್ತಸಾರ ಮಾಡುತ್ತಿದ್ದವು.
ಮಾದ್ಯಮ ಕ್ಷೇತ್ರಕ್ಕೆ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದೀರಿ .ನಾವೂ ಕೂಡಾ ವಿದ್ಯುನ್ಮಾನ ಮಾಧ್ಯಮದ ವ್ಯಾಪ್ತಿಯಲ್ಲಿ ಯೇ ಬರುವುದರಿಂದ ಧಾರಾವಾಹಿ ಚಿತ್ರೀಕರಣಕ್ಕೆ ಅನುವು ಮಾಡಿಕೊಡುವಂತೆ ಕರ್ನಾಟಕ ಕಿರುತೆರೆ ಸಂಘ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿತ್ತು.
ಟಿವಿ ಅಸೋಸಿಯೇಷನ್ ಮನವಿಯನ್ನು ಪರಿಗಣಿಸಿ ಹೊರಾಂಗಣ ಚಿತ್ರೀಕರಣಕ್ಕೆ ನಿಷೇದ ಹೇರಿ ಅನುಮತಿ ನೀಡಲಾಗಿದೆ.
ಲಾಕ್ ಡೌನ್ ಜಾರಿಯಾದ ಬಳಿಕ ಸರಿ ಸುಮಾರು ಮಾರ್ಚ್ 22 ರಿಂದ ಎಲ್ಲಾ ವಾಹಿನಿಗಳ ಧಾರಾವಾಹಿ ,ರಿಯಾಲಿಟಿ ಶೋ ಸೇರಿದಂತೆ ಇನ್ನಿತರೆ ಚಿತ್ರೀಕರಣ ಸ್ಥಗಿತಗೊಂಡಿತ್ತು.
ಧಾರಾವಾಹಿ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿರುವುದರಿಂದ ಕಿರುತೆರೆ ಮತ್ತೆ ಗರಿಗೆದರಲಿದೆ.
ಜೊತೆಗೆ ವಾಹಿನಿಗಳೂ ಕೂಡ ಮುಂದಿನ ದಿನಗಳಲ್ಲಿ ಹೊಸ ಎಪಿಸೋಡ್ ಪ್ರಸಾರ ಮಾಡಲು ಮುಂದಾಗಿವೆ.

Leave a Comment