ಧಾರವಾಡ ಅರಣ್ಯಾಧಿಕಾರಿಗಳ ಜೇಷ್ಟತಾ ಪಟ್ಟಿ ದೋಷಪೂರಿತ

ಧಾರವಾಡ ಅ.24–ಅರಣ್ಯಇಲಾಖೆಯ ಸಿಬ್ಬಂದಿಗಳು ದಿನದ 24 ಘಂಟೆಯೂಅರಣ್ಯ ಸಂರಕ್ಷಣೆಯಕರ್ತವ್ಯ ವನ್ನು ನಿರ್ವಹಿಸುತ್ತಿದ್ದು, ಈ ಪರಿಸ್ಥಿತಿಯಲ್ಲಿ ಮುಖ್ಯಅರಣ್ಯ ಸಂರಕ್ಷಣಾಧಿಕಾರಿಗಳು ತರಾ-ತುರಿಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳ ಜೇಷ್ಟತಾ ಪಟ್ಟಿಯನ್ನು ಅಂತಿಮಗೊಳಿಸಿರುತ್ತಾರೆ.
ಸುಮಾರು 20-30 ವರ್ಷಗಳವರೆಗೆ ಕರ್ತವ್ಯ ನಿರ್ವಹಿಸಿ ಅರಣ್ಯರಕ್ಷಕ ಹುದ್ದೆಯಿಂದಉಪವಲಯ ಅರಣ್ಯಾಧಿಕಾರಿಗಳಾಗಿ ಸ್ಥಾನಪನ್ನ ಮುಂಬಡ್ತಿ ಹೊಂದಿದ್ದರೂ ಸಹ ದಿನಾಂಕ:23-08-2019 ರಂದು ಪ್ರಕಟಿಸಿದ ಜೇಷ್ಟತಾ ಪಟ್ಟಿಯಲ್ಲಿ ಹೆಸರೇಇಲ್ಲದೆಅತಂತ್ರ ಪರಿಸ್ಥಿತಿಯಲ್ಲಿ ಉಪವಲಯ ಅರಣ್ಯಾಧಿಕಾರಿಗಳುಕರ್ತವ್ಯ ನಿರ್ವಹಿಸುತ್ತಿದ್ದು, ಇದರಿಂದಸೇವಾ ಜೇಷ್ಠತೆಯಲ್ಲಿ ಭಾರಿಅನ್ಯಾಯವಾಗಿರುತ್ತದೆ ಹಾಗೂ ಕೂಡಲೇ ಅಂತಿಮಗೊಳಿಸಿದ ಉಪವಲಯ ಅರಣ್ಯಾಧಿಕಾರಿಗಳ ದೋಷಪೂರಿತಜೇಷ್ಟತಾ ಪಟ್ಟಿಯನ್ನು ಹಿಂಪಡೆಯಲುಉಪವಲಯ ಅರಣ್ಯಾಧಿಕಾರಿಗಳ ಸಂಘ ಆಗ್ರಹಿಸುತ್ತದೆ
ಒಂದು ವೇಳೆ ಜೇಷ್ಟತಾ ಪಟ್ಟಿಯನ್ನು ಪುನರ್ ಪರಿಶಿಲಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ದಿನಾಂಕ:28-08-2019 ರಿಂದಧಾರವಾಡ, ಗದಗ, ಹಾವೇರಿಜಿಲ್ಲೆಯಎಲ್ಲಉಪವಲಯ ಅರಣ್ಯಾಧಿಕಾರಿಗಳು ಅನಿರ್ಧಷ್ಟಅವಧಿಯವರೆಗೆ  ಮುಖ್ಯಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂದೆ ಉಪವಾಸ ಕುಳಿತುಕೊಳ್ಳಲು ನಿರ್ಧರಿಸಲಾಗಿದೆ.

Leave a Comment