ಧಾರವಾಡದಲ್ಲಿ ದಂಗಲ್ – ಹರ್ಷಪಟ್ಟ ಸಾರ್ವಜನಿಕರು

ಧಾರವಾಡ ಫೆ.23- ನಗರದಲ್ಲಿ 2ನೇ ದಿನದ ಕುಸ್ತಿಹಬ್ಬಕ್ಕೆ ಕರ್ನಾಟಕ ಕಾಲೇಜ ಮೈದಾನದಲ್ಲಿ ಚುಮು ಚುಮು ಚಳಿಯಲ್ಲಿ ಕ್ರೀಡಾಪಟುಗಳು ಮೈದಾನದತ್ತ ಧಾವಿಸಿದರು. ವಿವಿಧ ವಯೋಮಿತಿಯ ಕ್ರೀಡಾಪಟುಗಳು ತಮ್ಮ ತಮ್ಮ ಮೈದಾನಗಳಿಗೆ ಬಂದು ಆಟದ ಎದುರಾಳಿಯ ವಿವರ ಪಡೆದು ಕುಸ್ತಿಗೆ ಅಣಿಯಾಗುವ ದೃಶ್ಯಾವಳಿಗಳನ್ನು ಸಾರ್ವಜನಿಕರು ನೋಡುತ್ತಲೇ ಕುಸ್ತಿ ಫಲಿತಾಂಶಗಳ ಆಗಮನದತ್ತ ಚಿತ್ತ.
ಮೂರು ಕಡೆ ಕುಸ್ತಿ ಮೈದಾನವಿದ್ದು ತಮ್ಮ ತಮ್ಮ ಗ್ರಾಮದ ಪಟುಗಳ ಹುಡುಕಾಟದಲ್ಲಿ ಕೆಲಜನ ಅತ್ತಿತ್ತ ತಿರುಗಾಡುವ ತವಕ, ಮೋಜು ತರಿಸುವಂತಿತ್ತು.
ಮಹಿಳಾ ಕುಸ್ತಿ ಮೈದಾನದಲ್ಲಿ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಕಿಕ್ಕಿರಿದು ಸೇರಿರುವದು ವಿಶೇಷವಾಗಿತ್ತು. ಗೆದ್ದವರ ವಿಜಯೋತ್ಸವಗಳು ಮೈದಾನದಲ್ಲಿಯೇ ನಡೆದವು.
ಇನ್ನೊಂದು ಮೈದಾನದಲ್ಲಿ ಪ್ರಸಿದ್ಧ ಪೈಲವಾನರ ಕುಸ್ತಿ ವಿಭಾಗದಲ್ಲಿ ಕುಸ್ತಿ ಪ್ರೇಮಿಗಳು ತಮ್ಮ ತಮ್ಮ ಜಾಗೆಗಳನ್ನು ಭದ್ರಪಡಿಸಿಕೊಂಡು ಖುಷಿಪಟ್ಟರು.
ಬಿಡುವಿನ ವೇಳೆಯಲ್ಲಿ ಆಹಾರ ಮೇಳದಲ್ಲಿ ಆಯೋಜಿಸಲಾದ ವಿವಿಧ ಬಗೆಯ ತಿಂಡಿ-ತಿನಿಸುಗಳನ್ನು ಖರೀದಿಸುವ ಸಾರ್ವಜನಿಕರು ಸವಿದು ಮಜಾ ಉಡಾಯಿಸಿದರು.

Leave a Comment