ಧರ್ಮಸ್ಥಳದಲ್ಲಿ ಕ್ಷುಲ್ಲಕ ದೀಕ್ಷಾ ಸಮಾರಂಭ

ಉಜಿರೆ, ಫೆ.೧೧- ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಭಾನುವಾರರತ್ನಗಿರಿಯಲ್ಲಿ ಬಾಹುಬಲಿಯ ಪದತಲದಲ್ಲಿಧಾರ್ಮಿಕ ವಿಧಿ-ವಿಧಾನಗಳು ನಡೆದರೆ, ಇತ್ತಅಮೃತವರ್ಷಿಣಿ ಸಭಾ ಭವನದಲ್ಲಿ ಮೋಕ್ಷ ಸಾಧನೆಗಾಗಿಕ್ಷುಲ್ಲಕ ದೀಕ್ಷಾ ಮಹೋತ್ಸವದ ಸಂಭ್ರಮ-ಸಡಗರ.
ಆಚಾರ್ಯ ಶ್ರೀ ೧೦೮ ವರ್ಧಮಾನ ಸಾಗರ್‌ಜಿ ಮುನಿಮಹಾರಾಜರು, ಆಚಾರ್ಯ ಶ್ರೀ ೧೦೮ ಪುಷ್ಪದಂತ ಸಾಗರ ಮುನಿ ಮಹಾರಾಜರು ಹಾಗೂ ಮುನಿ ಸಂಘದವರು ಮತ್ತು ಮಾತಾಜಿಯವರ ನೇತೃತ್ವದಲ್ಲಿಐದು ಮಂದಿಗೆ ಕ್ಷುಲ್ಲಕ ದೀಕ್ಷೆ ನೀಡುವ ಮಹೋತ್ಸವ ನಡೆಯಿತು.
ಮಧ್ಯಪ್ರದೇಶದ ೨೪ ವರ್ಷ ಪ್ರಾಯದ ಸತೀಶ್ ಬೈಯ್ಯಾಜಿ, ಹೈದ್ರಾಬಾದ್‌ನ ಪೂರನ್ ಬೈಯ್ಯಾಜಿ, ಉತ್ತರ ಪ್ರದೇಶದ ಶ್ರೀ ಪ್ರಭು ಬೈಯ್ಯಾಜಿ, ಸಂಯಮ ಮತ್ತು ಸವಿತಾಕ್ಷುಲ್ಲಕ ದೀಕ್ಷೆ ಪಡೆದರು.
ಬೆಳಿಗ್ಗೆ ಭಗವಾನ್‌ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆ ಬಳಿಕ ದೀಕ್ಷೆ ಪಡೆಯುವಐದು ಮಂದಿಯನ್ನು ಹಾಗೂ ಮುನಿ ಸಂಘದವರನ್ನು ಭವ್ಯ ಮೆರವಣಿಗೆಯಲ್ಲಿಅಮೃತ ವರ್ಷಿಣಿ ಸಭಾ ಭವನಕ್ಕೆ ಕರೆತರಲಾಯಿತು. ದೀಕ್ಷೆ ಪಡೆಯುವವರನ್ನುಉತ್ತಮ ವಸ್ತ್ರಾಭರಣ ತೊಡಿಸಿ ಸಿಂಗರಿಸಲಾಗಿತ್ತು. ಧರ್ಮಸ್ಥಳದಅನಿತಾ ಸುರೇಂದ್ರಕುಮಾರ್‌ಅಕ್ಕಿಯಿಂದ ಸ್ವಸ್ತಿಕವನ್ನು ರಚಿಸಿದರು. ದೀಕ್ಷಾರ್ಥಿಗಳನ್ನು ಮುನಿಗಳು ಯಾಕೆ ದೀಕ್ಷೆ ಪಡೆಯುವುದುಎಂದು ಪ್ರಶ್ನಿಸಿದರು. ಎಲ್ಲರೂಆತ್ಮಕಲ್ಯಾಣಕ್ಕಾಗಿ ಹಾಗೂ ಮೋಕ್ಷಪ್ರಾಪ್ತಿಗಾಗಿ ದೀಕ್ಷೆ ಪಡೆಯುವುದಾಗಿತಮ್ಮಅಭಿಪ್ರಾಯತಿಳಿಸಿದರು.ಅವರ ಮಾತಾ-ಪಿತರಲ್ಲಿಯೂಒಪ್ಪಿಗೆ ಪಡೆದ ಬಳಿಕ ದೀಕ್ಷಾಕಾರ್ಯಕ್ರಮ ನಡೆಯಿತು. ದೀಕ್ಷಾರ್ಥಿಗಳ ಎಲ್ಲಾ ಆಭರಣಗಳನ್ನು ಒಂದೊಂದಾಗಿ ಕಳಚಲಾಯಿತು.ಅಂಗಿ ಮತ್ತು ಬಟ್ಟೆಯನ್ನೂ ಕಳಚಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಕೇಶಲೋಚನ ಮಾಡಲಾಯಿತು.ತಲೆಯಕೂದಲನ್ನು ಮುನಿಗಳು ಕೈಯಿಂದ ಎಳೆದು ತೆಗೆಯುವುದಕ್ಕೆ ಕೇಶಲೋಚನ ಎನ್ನುತ್ತಾರೆ. ಸಂಯಮ ಮತ್ತು ಸವಿತಾಗೆ ಬಿಳಿ ಸೀರೆ ಉಡಿಸಿದರು. ಪಂಚ ನಮಸ್ಕಾರ ಮಂತ್ರ ಪಠಣ ಹಾಗೂ ಶ್ಲೋಕಗಳ ಪಠಣದೊಂದಿಗೆ ಮುನಿ ಸಂಘದವರುಕ್ಷುಲ್ಲಕ ದೀಕ್ಷೆ ನೀಡಿದರು.
ಐದು ಮಂದಿಗೂ ಪಿಂಛಿ ಮತ್ತುಕಮಂಡಲ ಹಾಗೂ ಸ್ವಾಧ್ಯಾಯಕ್ಕಾಗಿ ಶಾಸ್ತ್ರ ಗ್ರಂಥಗಳನ್ನು ನೀಡಲಾಯಿತು.
ನಾಮಕರಣ: ಸತೀಶ್ ಬೈಯ್ಯಾಜಿಅವರನ್ನು ಪರಮಸಾಗರ್ ಮಹಾರಾಜ್, ಪೂರನ್ ಬೈಯ್ಯಾಜಿಅವರನ್ನು ಪರಮಾತ್ಮಸಾಗರ್‌ಎಂದು, ಶ್ರೀಪ್ರಭು ಬೈಯ್ಯಾಜಿಅವರನ್ನು ಪ್ರಭಾಕರ್ ಸಾಗರ್ ಮಹಾರಾಜ್‌ಎಂದು ಸಂಯಮಅವರನ್ನುಅಮರಜ್ಯೋತಿ ಮಾತಾಜಿಎಂದು ಹಾಗೂ ಸವಿತಾಅವರನ್ನುಅಮೃತಜ್ಯೋತಿ ಮಾತಾಜಿಎಂದುಆಚಾರ್ಯ ಪುಷ್ಪದಂತ ಸಾಗರ ಮುನಿಮಹಾರಜರು ನಾಮಕರಣ ಮಾಡಿದರು.
ದೀಕ್ಷೆಯಿಂದಆತ್ಮಕಲ್ಯಾಣ, ಮೋಕ್ಷ ಪ್ರಾಪ್ತಿ: ಸುಖ-ಭೋಗಗಳನ್ನು ತ್ಯಾಗ ಮಾಡಿ ವೈರಾಗ್ಯ ಭಾವನೆಯಿಂದಯೋಗ ಸಾಧನೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಆತ್ಮನೇ ಪರಮಾತ್ಮನಾಗಬಲ್ಲ ಎಂದುಆಚಾರ್ಯ ಶ್ರೀ ೧೦೮ ವರ್ಧಮಾನ ಸಾಗರ ಮುನಿಮಹಾರಾಜರು ಹೇಳಿದರು.
ಐದು ಮಂದಿಗೆ ಕ್ಷುಲ್ಲಕ ದೀಕ್ಷೆ ನೀಡಿದ ಬಳಿಕ ಅವರು ಮಂಗಲ ಪ್ರವಚನ ಮಾಡಿದರು. ರಾಗದ ಪರಿತ್ಯಾಗವೇ ವೈರಾಗ್ಯ. ದೀಕ್ಷೆಯು ಶಾಶ್ವತ ಸುಖಕ್ಕೆ ಕಾರಣವಾಗಿದೆ.ಮೋಕ್ಷಪ್ರಾಪ್ತಿಗೆ ಮನುಷ್ಯಜನ್ಮವೇ ಶ್ರೇಷ್ಠವಾಗಿದೆಎಂದು ಮುನಿಗಳು ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಂ, ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಹರ್ಷೆಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್ ಮತ್ತು ಶ್ರದ್ಧಾಅಮಿತ್ ಹಾಗೂ ಮಾನ್ಯ ಉಪಸ್ಥಿತರಿದ್ದರು.

Leave a Comment