ಧರ್ಮವನ್ನು ಮೇಲೆತ್ತಲು ಕರೆ

ಅಳ್ನಾವರ,ಜ14 ಸಮಾನತೆ ತತ್ವ ಪ್ರತಿಪಾದಿಸಿದ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಬೆಳೆಸಿಕೊಳ್ಳುವ ಹಂಬಲ ಹೃಯಯಗಳು ಮುಂದೆ ಬರಬೇಕು. ನಮ್ಮ ದೇಶ ಆಧ್ಯಾತ್ಮಿಕ ತಳಹದಿಯ ಮೇಲೆ ನಿಂತಾಗ ಮಾತ್ರ ಉನ್ನತ ಮಟ್ಟದ ಸಾಧನೆ ಸಾದಿಸಲು ಸಾಧ್ಯ . ಧರ್ಮವನ್ನು ಮೇಲೆತ್ತುವ ಕಾರ್ಯಕ್ಕೆ ಒತ್ತು ನೀಡಿ ಎಂದು ಹೃತಿಕ ಕುಲಕರ್ಣಿ ಹೇಳಿದರು.
ಇಲ್ಲಿನ ಸಂಜೀವಿನ ಆಸ್ಪತ್ರೆಯಲ್ಲಿ ಸ್ವಾಮಿ ವಿವೇಕಾನಂದರ ಗೆಳೆಯರ ಬಳಗ ಹಾಗೂ ಸಂಜೀವನಿ ಯೋಗ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು , ಆಧ್ಯಾತ್ಮಿಕವಾಗಿ ಮತ್ತು ಧಾರ್ಮಿಕವಾಗಿ ಬೆಳೆಯುವ ಸ್ಥಿತಿಗಳನ್ನು ಅರ್ಥೈಸಿಕೊಳ್ಳುವ ಯುವ ಮನಸ್ಸುಗಳು ಮುಂದೆ ಬಂದಾಗ ಮಾತ್ರ ರಾಷ್ಟ್ರದ ಸಮಸ್ಯೆಗಳನ್ನು ಸಿಂಹದಂತೆ ಬಗೆಹರಿಸಬಹುದು  ಎಂದರು.
ಹುಚ್ಚು ಉತ್ವಾಹ ಮಾಡದೆ ಸ್ಥಿರವಾದ ಮನಸ್ಸುಗಳನ್ನು ಜಾಗೃತವಾಗಿಟ್ಟುಕೊಂಡು ಮುನ್ನುಗ್ಗಬೇಕು. ತಾಯಿ ನಾಡಿನ ಪ್ರೀತಿ ಜೊತೆ  ದೇಶದ ದೀನ ದಲಿತರ, ಬಡವರ ಮತ್ತು ಅಜ್ಞಾನಿಗಳ ಸೇವೆ ಮಾಡುವ ಚಿಂತನೆ ಎಲ್ಲರೂ ರೂಡಿಸಿಕೊಳ್ಳಬೇಕು ಎಂದರು.
ಪುಂಡಲಿಕ ಪಾರದಿ, ನಾರಾಯಣ ಪಟೇಲ, ರಾಜು ಅಷ್ಟೇಕರ, ಬಾಳು ಗಾವಡೆ, ಉದಯ ಶಿಬ್ರಿಕೇರಿ, ವಿಜಯ ಕುಮಾರ ಕೌಜಲಗಿ, ದತ್ತಾ ನಿಟ್ಟೂರಕರ, ಉದಯ ಗಡಕರ, ಅಜಿತ ಬೆಟದೂರ, ಜ್ಞಾನೇಶ್ವರ ತಡಕೋಡ, ರವಿ ಮೇದಾರ ಮತ್ತಿತರು ಇದ್ದರು.

Leave a Comment