ಧರ್ಮನಿಂದನೆ: ಆರೋಪ

ಇಬ್ಬರ ಬಂಧನ
ಬಂಟ್ವಾಳ, ಜ. ೧೩- ವಾಟ್ಸ್‌ಆಪ್‌ನ ಗ್ರೂಪೊಂದರಲ್ಲಿ ಧರ್ಮನಿಂದನೆ, ಮಹಿಳೆಯ ಅವಹೇಳನ ಹಾಗೂ ಕೋಮುದ್ವೇಷ ಕೆರಳಿಸುವ ಸಂದೇಶ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಉಪ್ಪಿನಂಗಡಿಯ ಬಾಲಕೃಷ್ಣ ಪೂಜಾರಿ (೪೮) ಹಾಗೂ ಬಂಟ್ವಾಳದ ಇರಾ ಗ್ರಾಮದ ಸತೀಶ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಬಾಲಕೃಷ್ಣ ಪೂಜಾರಿ ಕೆಎಸ್ಸಾರ್ಟಿಸಿ ಬಸ್‌ವೊಂದರ ಚಾಲಕನಾಗಿದ್ದು, ಗ್ರೂಪ್‌ನಲ್ಲಿ ಕೋಮುದ್ವೇಷ ಕೆರಳಿಸುವ ಹಾಗೂ ಮಹಿಳೆಯೋರ್ವರನ್ನು ಕೀಳು ಮಟ್ಟದಲ್ಲಿ ನಿಂದಿಸುವ ಮತ್ತು ಆಕ್ರಮಣಕಾರಿಯಾದ ಸಂದೇಶವನ್ನು ಹಾಕಿ, ಇತರ ಗ್ರೂಪ್‌ಗಳಿಗೂ ಹರಿಯಬಿಟ್ಟಿದ್ದು, ಸತೀಶ್ ವಾಟ್ಸ್‌ಆಪ್ ಗ್ರೂಪಿನ ಅಡ್ಮಿನ್ ಆಗಿದ್ದು, ಈತನ ಮೇಲೂ ಕ್ರಮ ಜರಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತ ಆರೋಪಿಗಳು ಧಾರ್ಮಿಕ ಭಾವನೆಗಳಗೆ ಹಾನಿಯುಂಟು ಮಾಡಬಲ್ಲ, ಕೋಮುದ್ವೇಷ ಕೆರಳಿಸುವ ಹಾಗೂ ಮಹಿಳೆಯ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಪೋಸ್ ಮಾಡಿದ್ದರು ಎಂದು ಬಂಟ್ವಾಳ ಪೊಲೀಸರು ತಿಳಿಸಿದ್ದಾರೆ.

Leave a Comment