ಧರ್ಮಗುರು ಸಾವು ಪ್ರಕರಣ ತನಿಖಾಧಿಕಾರಿಯಾಗಿ ಕಾಪು ಸಿಪಿಐ ಪ್ರಸಾದ್ ನೇಮಕ

ಉಡುಪಿ, ನ.೭- ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಹಾಗೂ ಶಿರ್ವ ಡೋನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ.ಮಹೇಶ್ ಡಿಸೋಜ ಸಾವಿನ ಪ್ರಕರಣದ ತನಿಖೆಯನ್ನು ಸಮಗ್ರ ಮತ್ತು ಅತಿ ಶೀಘ್ರವಾಗಿ ಉನ್ನತ ಮಟ್ಟದಲ್ಲಿ ನಡೆಸುವ ನಿಟ್ಟಿನಲ್ಲಿ ಮುಂದಿನ ತನಿಖಾಧಿಕಾರಿಯಾಗಿ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಅವರನ್ನು ನಿಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಅ.೧೧ರಂದು ರಾತ್ರಿ ವೇಳೆ ಫಾ.ಮಹೇಶ್ ಡಿಸೋಜ ಶಿರ್ವ ಡಾನ್ ಬಾಸ್ಕೋ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ. ಈ ಕುರಿತು ಶಿರ್ವ ಎಸ್ಸೈ ಅಬ್ದುಲ್ ಖಾದರ್ ತನಿಖೆ ನಡೆಸುತ್ತಿದ್ದರು. ಧರ್ಮಗುರು ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಚರ್ಚ್‌ನ ಸಹಸ್ರ ಸಂಖ್ಯೆಯ ಭಕ್ತರು ನ.೨ ಮತ್ತು ೩ರಂದು ಶಿರ್ವ ಚರ್ಚ್ ಆವರಣದಲ್ಲಿ ಪ್ರತಿಭಟನೆ ಹಾಗೂ ನ.೫ರಂದು ಶಿರ್ವ ಪೇಟೆಯಲ್ಲಿ ಬೃಹತ್ ವೌನ ಪ್ರತಿಭಟನೆಯನ್ನು ನಡೆಸಿದ್ದರು.

Leave a Comment