ಧನಸ್ಸು

ವರ್ಷಾರಂಭದಿಂದ ಗುರು 12.9.2017 ರ ವರೆಗೆ 10ನೇಯನವನಾಗಿದ್ದಾನೆ. 17.3.2018ರ ವರೆಗೆ 11ನೇಯನವನಾಗಿ ಬಲಿಷ್ಠ ಸಾಧನೆ ಮಾಡಿಸುವನು. ಸಾಧು- ಸಜ್ಜನರ ಸಹವಾಸಗಳು ಬದುಕಿಗೆ ಬುನಾದಿಯಾಗುವವು. ಆರಂಭಿಸಿದ ಕೆಲಸಗಳು ಸುಖಾಂತವಾಗಿ ಈಡೇರುವವು. ಉದ್ಯೋಗದಲ್ಲಿ ಅರ್ಥವ್ಯವಸ್ಥೆ ತೃಪ್ತಿ ಕೊಡುವುದು. ಅಧಿಕಾರದ ಗುದ್ದಗೆ ಏರುವಿರಿ. ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಬಡ್ತಿಯೂ ಬರಲಿದೆ. ಕೈಗಾರಿಕೆಗಳಿಗೆ ಬಂಡವಾಳ ಹೂಡುವಿರಿ. ಆದಾಯ ಕಂಡು ತೃಪ್ತರಾಗುವರು. ಹಿಂಗಾರಿನಿಂದ ಸಾಮಾನ್ಯ ಲಾಭ ಸಿಗುವುದು. ಆಸ್ತಿ ಖರೀದಿ ಮಾಡುವಿರಿ. ಸಮಾಜದಲ್ಲಿ ಎಲ್ಲೆಡೆ ಗೌರವಾದರಗಳು ವಿಜೃಂಭಿಸುವವು. ಆರೋಗ್ಯ ಚೈತನ್ಯ ಕೊಡಲಿದೆ. 20.6.2017ರ ವರೆಗೆ ಶನಿಯು ಜನ್ಮದಲ್ಲಿದ್ದು, ವಕ್ರಿಯಾಗಿ 25.10.2017ರ ವರೆಗೆ 12ನೆಯವನು. ಮುಂದೆ ಮಾರ್ಗಿಯಾಗಿ ಜನ್ಮದಲ್ಲಿರುವನು. ಕುಟುಂಬದಲ್ಲಿ ಅಸಮಾಧಾನದ ಹೊಗೆಯಾಡಲಿದೆ. ವ್ಯಾಪಾರ, ಕೃಷಿ, ಕೈಗಾರಿಕೆಗಳಲ್ಲಿ ಹಾನಿ ಕಂಡು ಬರುವುದು. ಮಿತ್ರ- ಬಂಧುಗಳಲ್ಲಿ ಮನಸ್ತಾಪವಾಗುವುದು. ಅವಮಾನ ಪ್ರಸಂಗ ಘಾಸಿಪಡಿಸುವುದು. ಹಳೆಯ ದ್ವೇಷಗಳು ಬೂದಿಮುಚ್ಚಿದ ಕೆಂಡದಂತಿರುವುದು. ತಟಸ್ಥ ವಿಷಯಗಳನ್ನು ಕೆದಕಬೇಡಿ. ಗುರುರಕ್ಷೆಯಿಂದ ಎಲ್ಲವೂ ಮಾಯವಾಗುವವು. ವೈದ್ಯರು, ವಕೀಲರು, ಮಹಿಳೆಯರು ಕಷ್ಟಪಟ್ಟು ಸಂಪಾದನೆ ಮಾಡುವರು.

ಆದಾಯ 8, ವ್ಯಯ 11