ದ್ವಿಚಕ್ರ ವಾಹನ ಕಳ್ಳರ ಬಂಧನ : 4 ಲಕ್ಷ ಮೌಲ್ಯದ ವಾಹನಗಳ ಜಪ್ತಿ

 

ಕಲಬುರಗಿ,ಫೆ.1-ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ಪೊಲೀಸರು 4 ಲಕ್ಷ ರೂಪಾಯಿ ಮೌಲ್ಯದ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಸುಲ್ತಾನಪುರ ಕ್ರಾಸ್ ಇಟ್ಟಂಗಿ ಭಟ್ಟಿಯ ಮಹ್ಮದ್ ಗೌಸ್ ಮಹ್ಮದ್ ಶಫಿ ಸೊಲ್ಲಾಪೂರವಾಲೆ (23) ಮತ್ತು ಮಿಲ್ಲತ್ ನಗರದ ಮಕದೂಮ ಪತ್ರುಸಾಬ ರಟಕಲ್ (21) ಎಂಬುವವರನ್ನು ಬಂಧಿಸಿ ಮೂರು ಬೈಕ್, ಒಂದು ಟಾಟಾ ಎಸಿ ವಾಹನ ಸೇರಿ 40 ಲಕ್ಷ ರೂಪಾಯಿ ಬೆಲೆಬಾಳುವ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ನಂದಿಕೂರ ತಾಂಡಾದ ಶಾಂತಪ್ಪ ಹಣಮಂತ ಕಾಳೆ ಅವರ ಬೈಕ್ ಕಳವಾಗಿತ್ತು. ಈ ಸಂಬಂಧ ಅವರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಸಂಬಂಧ ಎಸ್ಪಿ ಎನ್.ಶಶಿಕುಮಾರ, ಹೆಚ್ಚುವರಿ ಎಸ್ಪಿ ಪ್ರಸನ್ನ ಬಿ.ದೇಸಾಯಿ ಮಾರ್ಗದರ್ಶನದಲ್ಲಿ ಗ್ರಾಮೀಣ ಉಪ ವಿಭಾಗದ ಡಿಎಸ್ಪಿ ಎಸ್.ಎಸ್.ಹುಲ್ಲೂರ, ಎಂ.ಬಿ.ನಗರ ಸಿಪಿಐ ಎ.ವಾಜೀದ್ ಪಟೇಲ್, ಫರಹತಾಬಾದ ಪೊಲೀಸ್ ಠಾಣೆ ಪಿಎಸ್ಐ ಸುರೇಶಕುಮಾರ, ಸಿಬ್ಬಂದಿಗಳಾದ ವಿಜಯಕುಮಾರ, ಗುಲಾಬಸಾಬ, ರೇವಣಸಿದ್ದಪ್ಪ, ರಘುವೀರಲಾಲ, ವೀರಶೆಟ್ಟಿ ಅವರನ್ನೊಳಗಂಡ ವಿಶೇಷ ತಂಡ ರಚಿಸಿದ್ದರು. ಸದರಿ ತಂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಕಳ್ಳತನ ಮಾಡಿದ ದೃಶ್ಯಾವಳಿ ಆಧರಿಸಿ ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಳವಾದ ಬೈಕ್ ಮತ್ತು ಇತರೆ ಕಡೆ ಕಳ್ಳತನ ಮಾಡಿದ ಎರಡು ಬೈಕ್ ಮತ್ತು ಕೃತ್ಯಕ್ಕೆ ಬಳಸಿದ ಟಾಟಾ ಎಸಿ ವಾಹನ ಜಪ್ತಿ ಮಾಡಿದ್ದಾರೆ.

Leave a Comment