ದ್ರೌಪದಿಯಾಗಿ ಮಿಂಚಲಿರುವ ದೀಪಿಕಾ!

ಮುಂಬೈ ನ ೧೧ – ಈಗಾಗಲೇ ಪದ್ಮಾವತಿ ರೂಪದಲ್ಲಿ ಕಂಗೋಳಿಸಿದ ಬಾಲಿವುಡ್‌ನ ಡಿಂಪಲ್ ಕ್ವೀನ್ ಹಾಗೂ ಕನ್ನಡತಿ ದೀಪಿಕಾ ಪಡುಕೋಣೆ ಶೀಘ್ರದಲ್ಲೇ ತೆರೆಯ ಮೇಲೆ ದ್ರೌಪದಿಯಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
ಮಹಾಭಾರತ ಪೌರಾಣಿಕ ಕಥೆಯನ್ನು ಆಧರಿಸಿದ ಚಿತ್ರದಲ್ಲಿ ನಟಿಸುತ್ತಿರುವ ದೀಪಿಕಾ, ಅದರಲ್ಲಿ ದ್ರೌಪದಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ರಿಲಯನ್ಸ್ ಎಂಟರ್ ಟೈನ್ ಮೆಂಟ್ ನಿರ್ಮಿಸುತ್ತಿದೆ.
ಮಹಾಭಾರತ ತನ್ನ ಪೌರಾಣಿಕ ಕಥೆಗಳು ಮತ್ತು ಸಮಾಜದ ಮೇಲೆ ಅದರ ಸಾಂಸ್ಕೃತಿಕ ಪ್ರಭಾವವನ್ನು ಅರಿತಿದ್ದೇವೆ. ಆದರೆ, ಇಲ್ಲಿಯವರೆಗೆ ಮಹಾಭಾರತ ಕೇವಲ ಗಂಡಸರ ಕಥೆಯಾಗಿ ಬಿಂಬಿಸಿಕೊಳ್ಳುತ್ತಿದ್ದು, ಅದನ್ನು ಮಹಿಳೆಯ ದೃಷ್ಟಿಯಿಂದ ನೋಡುವ ವಿಭಿನ್ನ ಪ್ರಯತ್ನವಿದೆ ಎಂದು ರಿಲಯನ್ಸ್ ಪ್ರೊಡಕ್ಷನ್ ತಿಳಿಸಿದೆ. ಈ ಸಂಸ್ಥೆ ಮಹಾಭಾರತದ ಕುರಿತ ಒಂದು ಕಾದಂಬರಿಯ ಹಕ್ಕನ್ನು ಪಡೆದುಕೊಂಡಿದ್ದು, ಅದನ್ನು ಆಧರಿಸಿ ಚಿತ್ರ ನಿರ್ಮಿಸಲಾಗುತ್ತಿದೆ ಎಂಬ ಸುದ್ದಿಯಿದೆ.
ಈ ಕುರಿತು ಮಾತನಾಡಿರುವ ದೀಪಿಕಾ ಇಷ್ಟು ಪುರಷ ಪ್ರದಾನ ಪಾತ್ರಗಳಿಗೆ ಹೆಚ್ಚಿನ ಮಹತ್ವವಿರುವ ಪೌರಣಿಕ ಚಿತ್ರಗಳು ತೆರೆಗೆ ಬಂದಿದೆ. ಆದರೆ ಮಹಾಭಾರತ ದ್ರೌಪದಿ ಬಗ್ಗೆ ಈಗಾಗಲೇ ಜನರಿಗೆ ತಿಳಿದಿದ್ದರೂ ಅದನ್ನು ತೆರೆ ಮೇಲೆ ತರುವುದು ರೋಮಾಂಚನಕಾರಿ ೨೦೨೧ರ ದೀಪಾವಳಿಗೆ ಇದರ ಮೊದಲ ಭಾಗ ತೆರೆಗೆ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ.
ಪೌರಣಿಕ ಪಾತ್ರಗಳಲ್ಲಿ ಈಗಾಗಲೇ ದೀಪಿಕಾ ಮನಸೂರೆಗೊಂಡಿದ್ದು, ದ್ರೌಪದಿಯಾಗಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಭಾರಿ ಕುತೂಹಲ ಮೂಡಿಸಿದೆ. ಪಾತ್ರ ಆಯ್ಕೆ ವಿಚಾರದಲ್ಲಿ ದೀಪಿಕಾ ತುಂಬಾನೇ ಜಾಗೃತೆ ವಹಿಸುತ್ತಾರೆ ಎಂದರೆ ತಪ್ಪಾಗಲಾರದು. ಈ ಮೊದಲ ನಟ ಅಮೀರ್ ಖಾನ್ ಅವರು ಮಹಾಭಾರತದ ವಿಬ್ ಸೀರಿಸ್‌ನ್ನು ತಂದಿದ್ದರು.

Leave a Comment