ದೋಸ್ತಾನಾ-2′ ಚಿತ್ರದಲ್ಲಿ ಅಭಿನಯಿಸಲು ಉತ್ಸುಕಳಾದ ಜಾಹ್ನವಿ

ಮುಂಬಯಿ, ಜು 5 – ಹಿಂದಿಯ ಸೂಪರ್ ಹಿಟ್ ‘ದೋಸ್ತಾನಾ’ ಚಿತ್ರದ ಅವತರಣಿಕೆಯಲ್ಲಿ ಅಭಿನಯಿಸುತ್ತಿರುವುದಕ್ಕೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಉತ್ಸುಕರಾಗಿದ್ದಾರಂತೆ.

ಕರಣ್ ಜೋಹರ್ ದೋಸ್ತಾನಾ ಚಿತ್ರದ ಅವತರಣಿಕೆಯನ್ನು ಬೆಳ್ಳಿ ಪರದೆಯ ಮೇಲೆ ತರಲು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿಗೆ ನಟ ಕಾರ್ತಿಕ್ ಆರ್ಯನ್ ಹಾಗೂ ಜಾಹ್ನವಿ ಕಪೂರ್ ಜೋಡಿ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಾಹ್ನವಿ ಕಪೂರ್, ‘ದೋಸ್ತಾನಾ-2’ ಚಿತ್ರದಲ್ಲಿ ಉತ್ತಮ ಸಂದೇಶವಿರುವುದಕ್ಕೆ ನಾನು ಉತ್ಸುಕಳಾಗಿಲ್ಲ. ಬದಲಾಗಿ, ಸಂದೇಶದೊಂದಿಗೆ ಹಾಸ್ಯ ಭರಿತವಾದ ಒಂದು ಕಥೆಯು ಇದೆ ಎಂದು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಕಾಲಿನ್ ಡಿ ಕುನ್ಹಾ ಅವರು ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 2008ರಲ್ಲಿ ತೆರೆ ಕಂಡ ‘ದೋಸ್ತಾನಾ’ ಚಿತ್ರದಲ್ಲಿ ನಟರಾದ ಜಾನ್ ಅಬ್ರಾಹಿಂ, ಅಭಿಷೇಕ್ ಬಚ್ಚನ್ ಹಾಗೂ ನಟಿ ಪ್ರಿಯಾಂಕಾ ಚೋಪ್ರಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.

Leave a Comment