‘ದೋಸ್ತಾನಾ-2’, ಕಾರ್ತಿಕ್-ಜಾಹ್ನವಿ ಜೋಡಿ

ಮುಂಬೈ, ಜೂನ್ 27 -ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಹಾಗೂ ನಟಿ ಜಾಹ್ನವಿ ಕಪೂರ್ ಜೋಡಿ ಇದೇ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದೆ.

ನಿರ್ದೇಶಕ ಕರಣ್ ಜೋಹರ್ ‘ದೋಸ್ತಾನಾ’ ಚಿತ್ರದ ಅವತರಣಿಕೆಯನ್ನು ತೆರೆಗೆ ತರುವ ಯೋಜನೆಯಲ್ಲಿದ್ದಾರಂತೆ.

2008ರಲ್ಲಿ ಕರಣ್, ನಟರಾದ ಜಾನ್ ಅಬ್ರಾಹಂ ಹಾಗೂ ಅಭಿಷೇಕ್ ಬಚ್ಚನ್ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ತಾರಾಗಣದಲ್ಲಿ ‘ದೋಸ್ತಾನಾ’ ಚಿತ್ರವನ್ನು ಹೊರತಂದಿದ್ದರು.

‘ದೋಸ್ತಾನ-2’ ಚಿತ್ರ ತಯಾರಿಯಾಗುತ್ತಿದೆ ಎಂಬ ಸುದ್ದಿ ಕೆಲ ಸಮಯದಿಂದ ಬಿಟೌನ್ ದಲ್ಲಿ  ಹರಿದಾಡುತ್ತಿತ್ತು. ಚಿತ್ರದಲ್ಲಿ ನಟ ರಾಜ್ ಕುಮಾರ್ ರಾವ್ ನಟಿಸುತ್ತಾರೆಂದು ಮತ್ತೊಮ್ಮೆ ಸಿದ್ದಾರ್ಥ್ ಮಲ್ಹೋತ್ರಾ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೀಗ, ಚಿತ್ರ ಕಾರ್ತಿಕ್ ಆರ್ಯನ್ ಪಾಲಾಗಿದ್ದು, ಜಾಹ್ನವಿ ಜೊತೆ ತೆರೆಹಂಚಿಕೊಳ್ಳಲಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕರಣ್ ಜೋಹರ್, ” ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಹಾಗೂ ಜಾಹ್ನವಿ ಕಪೂರ್ ಅಭಿನಯಿಸುತ್ತಿರುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ. ಧರ್ಮ ಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ಇದು ಕಾರ್ತಿಕ್ ರ ಮೊದಲನೇ ಚಿತ್ರ. ಕಾಲಿನ್ ಡಿ ಕುನ್ಹಾ ಎಂಬುವವರು ಈ ಚಿತ್ರದ ಮೂಲಕ ಪ್ರಥಮ ಬಾರಿಗೆ ನಿರ್ದೇಶನದತ್ತ ಪಾದಾರ್ಪಣೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Leave a Comment