‘ದೋಸ್ತಾನಾ-2’ನಲ್ಲಿ ನಟಿಸುತ್ತಿಲ್ಲ ರಾಜ್ ಕುಮಾರ್ ರಾವ್!

ಮುಂಬೈ, ಜು 9- ‘ದೋಸ್ತಾನಾ-2’ ಚಿತ್ರದಲ್ಲಿ ತಾವು ನಟಿಸುತ್ತಿಲ್ಲ ಎಂದು ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಹೇಳಿದ್ದಾರೆ.

ಕರಣ್ ಜೋಹರ್ ನಿರ್ದೇಶನದ ಸೂಪರ್ ಹಿಟ್ ‘ದೋಸ್ತಾನಾ’ ಚಿತ್ರದ ಅವತರಣಿಕೆ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ರಾಜ್ ಕುಮಾರ್ ರಾವ್ ಅಭಿನಯಿಸಲಿದ್ದಾರೆ ಎಂಬ ಗಾಳಿ ಸುದ್ದಿಯೊಂದು ಬಿಟೌನ್ ದಲ್ಲಿ ಹರಿದಾಡುತ್ತಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ರಾಜ್ ಕುಮಾರ್ ರಾವ್, ”ದೋಸ್ತಾನಾ-2′ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ. ಅಲ್ಲದೇ, ‘ಶುಭ ಮಂಗಲ ಜ್ಯಾದಾ ಸಾವಧಾನ್’ ಚಿತ್ರದ ಭಾಗವು ನಾನಾಗಿಲ್ಲ” ಎಂದಿದ್ದಾರೆ.

”ದೋಸ್ತಾನಾ-2′ ಚಿತ್ರಕ್ಕಾಗಿ ಕರಣ್ ಜೋಹರ್ ಅವರನ್ನು ಭೇಟಿ ಮಾಡಿದ್ದೆ. ಅವರಿಗೆ ನಾನು ತುಂಬಾ ಗೌರವ ನೀಡುತ್ತೇನೆ. ಆದರೆ, ಈ ಚಿತ್ರದಲ್ಲಿ ನಾವಿಬ್ಬರೂ ಒಂದಾಗಲೂ ಸಾಧ್ಯವಾಗಲಿಲ್ಲ. ಆದರೆ, ಶೀಘ್ರವೇ ಇಬ್ಬರೂ ಸೇರಿ ಎಲ್ಲರನ್ನು ಅಚ್ಚರಿ ಪಡಿಸಲಿದ್ದೇವೆ” ಎಂದು ಹೇಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.

‘ದೋಸ್ತಾನಾ-2’ ಚಿತ್ರಕ್ಕಾಗಿ ನಟ ಕಾರ್ತಿಕ್ ಆರ್ಯನ್ ಹಾಗೂ ಜಾಹ್ನವಿ ಕಪೂರ್ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ.

Leave a Comment