ದೋಣಿ ಮುಳುಗಿ ೧೫ ಸಾವು

ಅಹಮದಾಬಾದ್, ಆ. ೧೪- ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿ, ಮೀನುಗಾರರಿಗೆ ೨ ತಿಂಗಳ ಕಾಲ ನೀರಿಗಿಳಿಯದಂತೆ ಎಚ್ಚರಿಕೆ ನೀಡಿದ್ದರು. ಇಲ್ಲಿನ ರೂಪೆನ್ ಬಂದರಿನಲ್ಲಿ ನೀರಿಗಿಳಿದ ೨೪ ಮೀನುಗಾರರಲ್ಲಿ ೧೫ ಮಂದಿ ಸತ್ತು ಇತರ ಇಬ್ಬರು ನಾಪತ್ತೆಯಾಗಿದ್ದಾರೆ.
ಇವರು ೬ ದೋಣಿಗಳಲ್ಲಿ ಮೀನು ಹಿಡಿಯಲು ತೆರಳಿದ್ದು ೧೪ ಮಂದಿ ವಿವಿಧ ದಂಡೆಗಳಿಗೆ ಈಜಿ ಸುರಕ್ಷಿತವಾಗಿ ಬಂದಿದ್ದಾರೆ.
ಸತ್ತವರ ದೇಹಗಳು ತೇಲುತ್ತಾ ದಡಕ್ಕೆ ಬಂದಿವೆ. ನಾಪತ್ತೆಯಾಗಿರುವ ಇಬ್ಬರಿಗಾಗಿ ಕಡಲ್ಗಾವಲು ಪಡೆಗಳು ಶೋಧ ಕಾರ್ಯ ಆರಂಭಿಸಿವೆ ಎಂದು ಪೋರ್ಬಂದರ್‌ನ ಎಸ್ಪಿ ಪೃಥ್ವಿರಾಜ್ ಸಿನ್ಹಾ ಹೇಳಿದ್ದಾರೆ.

Leave a Comment