ದೊಡ್ಮನೆ ಬಿಕ್ಕಟ್ಟು ಬಾಯ್ಬಿಟ್ಟ ಶಿವಣ್ಣ

ದೊಡ್ಮನೆ ಬಿಕ್ಕಟ್ಟು ಬಾಯ್ಬಿಟ್ಟ ಶಿವಣ್ಣ
ಬೆಂಗಳೂರು, ಸೆ. ೭- ”ನಾವು ಬೇರೆ ಬೇರೆ ಮನೆಯಲ್ಲಿರಬಹುದು, ಏನೇ ಮನಸ್ತಾಪ ಇದ್ದರೂ ಅದನ್ನು ತೋರ್ಪಡಿಸಿಕೊಳ್ಳುವುದಿಲ್ಲ. ಸಮಸ್ಯೆ ಎದುರಾದಾಗ ನಾವೆಲ್ಲಾ ಒಂದೇ,”
”ಗ್ರಾಮಾಯಣ” ಚಿತ್ರದ ಟೀಸರ್ ಬಿಡುಗಡೆಯ ಸಂದರ್ಭದಲ್ಲಿ ಹಿರಿಯ ನಟ ಶಿವರಾಜ್ ಕುಮಾರ್ ನೀಡಿದ ಹೇಳಿಕೆ ಹಲವು ಅನುಮಾನ ಹಾಗೂ ಅಚ್ಚರಿಗೆ ಎಡೆಮಾಡಿಕೊಟ್ಟಿದೆ.
ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸೋದರ ಮಾವ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ರಾಘವೇಂದ್ರ ರಾಜ್ ಕುಮಾರ್ ಪತ್ನಿ ಮಂಗಳ, ಮತ್ತಿತರರು ವೇದಿಕೆಯಲ್ಲಿ ಆಸೀನರಾಗಿದ್ದ ಸಮಯದಲ್ಲಿ ಶಿವರಾಜ್ ಕುಮಾರ್ ಅವರು, ಹೇಳಿದ ಈ ಹೇಳಿಕೆ ಅನುಮಾನ ಮೂಡಿಸದೆ ಇರಲಾರದು.
ಪ್ರತಿಯೊಂದು ಮನೆಯಲ್ಲೂ ಮನಸ್ತಾಪ ಇದ್ದೇಇರುತ್ತದೆ. ಮನೆ ಎಂದ ಮೇಲೆ ಕುಟುಂಬದ ಸದಸ್ಯರಲ್ಲಿ ಮನಸ್ತಾಪ ಇರಲೇಬೇಕು. ಆಗಲೇ ಅದನ್ನು ಕುಟುಂಬ ಎನ್ನುವುದು. ಸಣ್ಣಪುಟ್ಟ ಸಮಸ್ಯೆಗಳು ಮನಸ್ತಾಪಗಳಿದ್ದರೂ ಇಲ್ಲ ಎಂದು ಹೇಳುವುದಿಲ್ಲ. ಹಾಗಂತ ಅದನ್ನು ಬಹಿರಂಗವಾಗಿ ಎಲ್ಲಿಯೂ ತೋರ್ಪಡಿಸುವುದಿಲ್ಲ ಮತ್ತು ವ್ಯಕ್ತಪಡಿಸುವುದೂ ಇಲ್ಲ ಎಂದು ಹೇಳಿದರು.
ಫೋಟೊ ನೋಡಿ ಅಳುತ್ತೇನೆ
ಅಪ್ಪಾಜಿ (ಡಾ. ರಾಜ್ ಕುಮಾರ್), ಅಮ್ಮ (ಪಾರ್ವತಮ್ಮ) ಅವರ ಫೋಟೊವನ್ನು ನೋಡಿ ಒಬ್ಬನೇ ಅಳುತ್ತೇನೆ. ಅವರೊಂದಿಗೆ ಕಳೆದ ದಿನಗಳು, ನೆನಪುಗಳು ಮತ್ತೆ ಮತ್ತೆ ಮರುಕಳಿಸುತ್ತವೆ ಎಂದರು.
ನಾನು, ಪುನೀತ್, ರಾಘವೇಂದ್ರ ರಾಜ್ ಕುಮಾರ್, ಬೇರೆ ಬೇರೆ ಮನೆಗಳಲ್ಲಿ ವಾಸ ಮಾಡುತ್ತಿದ್ದರೂ, ನಾವೆಲ್ಲ ಸಮಸ್ಯೆ ಬಂದಾಗ ಒಂದಾಗುತ್ತೇವೆ. ನಮ್ಮಲ್ಲಿ ಯಾವುದೇ ತಪ್ಪು ತಿಳುವಳಿಕೆ ಇಲ್ಲ ಎಂದು ಹೇಳಿದರು.
ಮೊದಲು ಖುಷಿ ಪಡುವವನು ನಾನು
ಪುನೀತ್ ರಾಜ್ ಕುಮಾರ್
ನನ್ನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಆತನ ಪ್ರತಿ ಸಿನಿಮಾ ಯಶಸ್ಸು ಗಳಿಸಿದಾಗ ಮೊದಲು ಖುಷಿ ಪಡುವವನು ನಾನು ಎಂದು ಹೇಳಿದರು. ಮೊದಲ ಚಿತ್ರ, ಎರಡನೇ ಚಿತ್ರ ಗೆಲ್ಲಲಿಲ್ಲ ಎನ್ನುವ ಯಾವುದೇ ಒತ್ತಡಕ್ಕೆ ಒಳಗಾಗುವುದು ಬೇಡ. ಸೋಲಿನಲ್ಲೂ ಗೆಲುವು ಕಾಣಬೇಕು. ಅಂತಹ ಗೆಲುವು ನಿನ್ನದಾಗಲಿದೆ. ಅದಕ್ಕಾಗಿ ಕಾಯಿ ಎಂದು ನಟ ವಿನಯ್ ರಾಜ್ ಕುಮಾರ್‌ಗೆ ಶಿವರಾಜ್ ಕುಮಾರ್ ಕಿವಿಮಾತು ಹೇಳಿದರು.

ಅಪ್ಪ – ಅಮ್ಮ ಕಲಿಸಿದ ಹಾಗೂ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ತೊಂದರೆಗಳು ಸಾವಿರ ಇದ್ದರೂ ಯಾವುದೇ ಊರು, ಮನೆಗೆ ಹೋದರೂ ನೆಮ್ಮದಿಯಿಂದ ಮಲಗುತ್ತೇನೆ.  ಸಮಸ್ಯೆ ಇದ್ದದ್ದೇ ಎಂದು ಶಿವರಾಜ್ ಕುಮಾರ್ ಹೇಳಿದರು.  ಬಹುತೇಕರು ಹಳ್ಳಿಗಳಿಂದ ಬಂದವರೇ. ಹೀಗಾಗಿ ಹಳ್ಳಿಯ ನೆನಪುಗಳು ಯಾರೂ ಮರೀಬೇಡಿ ಎಂದು ಮನವಿ ಮಾಡಿದರು.

Leave a Comment