ದೊಡ್ಡ ಹೆಜ್ಜೆ ಧಾಂಗಡಿ

ಚಿಕ್ಕನೆಟಕುಂಟೆ ಜಿ.ರಮೇಶ್
ಐತಿಹಾಸಿಕ,ಸಾಮಾಜಿಕ ಮತ್ತು ಸಂದೇಶವಿರುವ ಚಿತ್ರಗಳ ನಿರ್ಮಾಣ ಚಿತ್ರರಂಗದಲ್ಲಿ ಆಗಾಗ ನಡೆಯುತ್ತಿದೆ. ಅಂತಹುದರ ಸಾಲಿಗೆ ಮತ್ತೊಂದು ಸದಭಿರುಚಿಯ “ಧಾಂಗಡಿ’ ಸೇರ್ಪಡೆಯಾಗಿದೆ. ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಂಡಿದ್ದು ಚಿತ್ರವನ್ನು ಸೂಕ್ತಸಮಯದಲ್ಲಿ ತೆರೆಗೆ ತರಲು ಚಿತ್ರತಂಡ ಸಿದ್ದ ಮಾಡಿಕೊಂಡಿದೆ.

ಸುರೇಂದ್ರ ಉಗಾರೆ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸಿದ್ರಾಮ ಕಾರಣಿಕ ನಿರ್ದೇಶನ ಮಾಡಿದ್ದಾರೆ. ಜೊತೆಗೆ ನಿರ್ಮಾಪಕ,ನಿರ್ದೇಶಕರ ಜೊತೆಗೆ ಜಯಸೂರ್ಯ, ಡಾ.ಸವಿತಾ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ’ಧಾಂಗಡಿ’ ಚಿತ್ರವನ್ನು ಬೆಳಗಾವಿ,ರಾಯಭಾಗ ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ.

ಚಿತ್ರ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಳೆದವಾರ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವಿತ್ತು. ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ, ದಲಿತಪರ ಹೋರಾಟಗಾರ ಮೋಹನ್‌ರಾಜ್ ಸೇರಿದಂತೆ ಅನೇಕ ಮಂದಿ ಧ್ವನಿಸುರುಳಿ ಬಿಡುಗಡೆ ಮಾಡಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭಕೋರಿದರು.

ಈ ವೇಳೆ ಮಾತಿಗಿಳಿದ ಸಾಹಿತಿ ಸಿದ್ದಲಿಂಗಯ್ಯ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನ ಆಧರಿಸಿ ಚಿತ್ರ ಮಾಡಲಾಗಿದೆ ಎನ್ನುವುದು ತಿಳಿದಿದೆ. ಸಮಾಜದ ಎಲ್ಲಾ ವರ್ಗದ ಜನರು ಸಮಾನತೆಯಿಂದ ಬಾಳಬೇಕೆನ್ನುವವ ಕನಸು ಅಂಬೇಡ್ಕರ್ ಅವರದಾಗಿತ್ತು. ಸಮಾಜಕ್ಕೆ ಸಂದೇಶ ನೀಡುವ ಚಿತ್ರಗಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಮೂಡಿ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಚಿತ್ರತಂಡ ಮುಂದಾಗುವ ಅಗತ್ಯವಿದೆ ಎಂದರು.

ನಿರ್ದೇಶಕ ಸಿದ್ರಾಮ ಕಾರಣಿಕ, ಈ ಹಿಂದೆ ಅಂಬೇಡ್ಕರ್ ಪಾತ್ರ ಮಾಡಿದ್ದೆ. ಈ ಬಾರಿ ಚಿತ್ರ ನಿರ್ದೇಶನ ಮಾಡುವ ಜೊತೆಗೆ ಅಂಬೇಡ್ಕರ್ ಅವರ ಪಾತ್ರವನ್ನೂ ಮಾಡಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮಾರ್ಚ್‌ನಲ್ಲಿ ತೆರೆಗೆ ತರುವ ಉದ್ದೇಶವಿದೆ. ಧಾಂಗಡಿ ಎಂದರೆ ದೊಡ್ಡ ಹೆಜ್ಜೆ ಎನ್ನುವ ಅರ್ಥವಿದೆ ಎಂದು ಹೇಳಿಕೊಂಡರು. ಬಾಬಾ ಅವರ ಕನಸು, ಆದರ್ಶ,ಸಮಾಜದ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಂಡ ಬಗೆಯ ವಿಷಯಗಳನ್ನು ಐತಿಹಾಸಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ಕಮರ್ಷಿಯಲ್ ಸ್ಪರ್ಶದೊಂದಿಗೆ ಚಿತ್ರ ಮಾಡಲಾಗಿದೆ. ಉತ್ತಮ ಚಿತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಚಿತ್ರಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಅಗತ್ಯ ಎಂದು ಕೇಳಿಕೊಂಡರು. ನಿರ್ಮಾಪಕ ಸುರೇಂದ್ರ ಉಗಾರೆ,ಮೂರು ಹಂತಗಳಲ್ಲಿ ಚಿತ್ರವನ್ನು ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮಾರ್ಚ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ. ಚಿತ್ರ ಬಿಡುಗಡೆಯಾಗವುದಕ್ಕೂ ಮುನ್ನ ಹೊಸ ಸುದ್ದಿ ನೀಡುವುದಾಗಿ ಕುತೂಹಲವನ್ನು ಕಾಪಾಡಿಕೊಂಡರು.

ನಾಯಕ ಜಯಸೂರ್ಯ,ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ಸಹಕಾರವಿರಲಿ ಎಂದರೆ ನಾಯಕಿ ಡಾ.ಸವಿತಾ, ಅಂಬೇಡ್ಕರ್ ಪತ್ನಿಯ ಪಾತ್ರ ಮಾಡಿದ್ದೇನೆ. ವೃತ್ತಿಯಲ್ಲಿ ವೈದ್ಯೆಯಾಗಿದ್ದು ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳವ ಉದ್ದೇಶವಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿಕೊಂಡರು.

ಪ್ರಮೋದ್ ಸಂಗೀತದಲ್ಲಿ ನಾಲ್ಕು ಹಾಡುಗಳು ಮೂಡಿ ಬಂದಿವೆ. ಮತ್ತೊಬ್ಬ ನಟಿ ಕನಕಲಕ್ಷ್ಮಿ ಬಾಲ ನಟಿಯಾಗಿ ಗುರುತಿಸಿಕೊಂಡಿದ್ದೆ ಚಿತ್ರದಲ್ಲಿ ಒಳ್ಳೆಯ ಪಾತ್ರವೇ ಸಿಕ್ಕಿದೆ ಎಂದರು.

Leave a Comment