ದೊಡ್ಡಪತ್ರೆ ಬಗ್ಗೆ ಎಷ್ಟು ಗೊತ್ತು!

ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯದೆಲೆಯನ್ನು ಅರೆದು ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ದೂರವಾಗುತ್ತದೆ. ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆ ಎಲೆ ಬಾಡಿಸಿ ನೆತ್ತಿಯ ಮೇಲೆ ಇಡುತ್ತಾರೆ.

ದೊಡ್ಡಪತ್ರೆ ಎಲೆಪೇಸ್ಟ್ ತಯಾರಿಸಿ ಅದನ್ನು ಚೇಳು ಕಚ್ಚಿದ ಗಾಯಕ್ಕೆ ಹಚ್ಚಿದರೆ  ನೋವು ದೂರ ವಾಗುತ್ತದೆ. ಒಂದು ವಾರದವರೆಗೆ ಎಲೆ ತಿಂದರೆ ಅರಿಶಿಣ ಕಾಮಾಲೆ ವಾಸಿಯಾಗುತ್ತದೆ.

ದೊಡ್ಡಪತ್ರೆಯನ್ನು ಜೀರಿಗೆ, ಎಳ್ಳಿನೊಂದಿಗೆ ಹುರಿದು ಕಾಯಿತುರಿ ಜೊತೆ ರುಬ್ಬಿ ಅದಕ್ಕೆ ಉಪ್ಪು, ಮಜ್ಜಿಗೆ ಹಾಕಿ ತಂಬುಳಿ ಮಾಡಿ ಕುಡಿದರೆ ಪಿತ್ತದ ಖಾಯಿಲೆಗಳು ಗುಣಮುಖವಾಗುವುದು.

ದೊಡ್ಡಪತ್ರೆ ಎಲೆಯನ್ನು ಉಪ್ಪಿನ ಸಹಿತ ತಿಂದರೆ ಜೀರ್ಣಶಕ್ತಿ ಅಧಿಕವಾಗುತ್ತದೆ. ದೊಡ್ಡ ಪತ್ರೆ ಎಲೆಯನ್ನು ಹುಳುಕಡ್ಡಿಯ ಭಾಗಕ್ಕೆ ತಿಕ್ಕುತ್ತಿದ್ದರೆ ಹುಳುಕಡ್ಡಿಯ ನಿವಾರಣೆ ಸಾಧ್ಯ.

ತುರಿಕೆ ರೋಗದ ಸಂಕೇತ!

ದೇ ಹದ ಯಾವುದೇ ಭಾಗಕ್ಕೆ ಸೊಳ್ಳೆ ಅಥವಾ ಇರುವೆ ಕಚ್ಚಿದರೆ ಆಗ ನಮಗೆ ನೋವು ಮತ್ತು ತುರಿಕೆ ಉಂಟಾಗುವುದು. ಏನು ಕಚ್ಚದೇ ಕೂಡ ತುರಿಕೆ ಆಗಾಗ್ಗೆ ಕಾಣಿಸಿಕೊಂಡರೆ ಅದು ರೋಗದ ಲಕ್ಷಣವಾಗಿರಬಹುದು.

ಕಿಡ್ನಿ ದೇಹದ ವಿಷಕಾರಿ ಕಲ್ಮಶವನ್ನು ಹೊರಹಾಕುತ್ತದೆ. ಕಿಡ್ನಿ ಸಮಸ್ಯೆ ಇದ್ದರೇ ತುರಿಕೆ ಕಂಡು ಬರುವುದು. ಪಿತ್ತಕೋಶದ ಕಾಯಿಲೆ ಇದ್ದರೂ ಚರ್ಮದಲ್ಲಿ ತುರಿಕೆ ಬರುತ್ತದೆ. ಹಾಗಾಗಿ ಹೆಚ್ಚು ಕಾಲ, ತುರಿಕೆ ಇದ್ದರೇ ವೈದ್ಯರ ಬಳಿ ತೆರಳಿ ಸಲಹೆ ಪಡೆಯುವುದು ಒಳ್ಳೆಯದು.

ಬೆನ್ನು ಮತ್ತು ಬೆನ್ನಿನ ಮಧ್ಯೆ ಭಾಗದಲ್ಲಿ ಯಾವುದೇ ಕೆಂಪು ಕಲೆಗಳು, ಇಲ್ಲದೆ ಇದ್ದರೂ ತುರಿಕೆ ಕಂಡು ಬಂದರೆ ಅದು ಬೆನ್ನು ಹುರಿಯ ಕಾಯಿಲೆ ಆಗಿರಬಹುದು. ಬೆನ್ನು ಹುರಿಗೆ ಗಾಯ ಅಥವಾ ಊರಿಯೂತದಿಂದ ಬೆನ್ನು ಹುರಿ ಸಮಸ್ಯೆ ಬರುತ್ತದೆ. ಮೊಣಕಾಲು, ಮಣಿ ಗಂಟಲು, ಕೃಷ್ಟಷ್ಠ  ಈ ಭಾಗಗಳಲ್ಲಿ ಕಂಪು ಗುಳ್ಳೆಗಳ ಜೊತೆ ತುರಿಕೆ ಕಾಣಿಸಿಕೊಂಡಿದೆ.

ಇದು ಡಯಾಬಿಟಿಸ್ ಹರ್ಪೆ ಬಥಾರ್ಮಿನ್ ಇದು ಚರ್ಮಕ್ಕೆ ಪ್ರಭಾವ ಬೀರುವ ಸೆಲಿಯಾಕ್ ರೋಗದ ಒಂದು ವಿಧ. ಲಿಂಪೋಟು ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ದೇಹವೀಡಿ ತುರಿಕೆ ಕಂಡು ಬರುತ್ತದೆ. ಹಾಗಾಗಿ ದೇಹದಲ್ಲಿ ತುರಿಕೆ ಇದ್ದರೇ ಆ ಬಗ್ಗೆ ನಿರ್ಲಕ್ಷ್ಯಮಾಡದೇ ದೇಹ ತಪಾಸಣೆ ಮಾಡಿಕೊಂಡರೆ ಆರೋಗ್ಯದಿಂದ ಇರಬಹುದು.

Leave a Comment