ದೈಹಿಕ ಹಲ್ಲೆ ಸಲ್ಲದು- ಕಲ್ಲಡ್ಕ ಪ್ರಭಾಕರ್

ಮೈಸೂರು, ಸೆ. 13- ನನಗೆ ಪತ್ರಕರ್ತೆ ಗೌರಿ ಲಂಕೇಶ್ ಅವರಾಗಲೀ, ಅವರ ತಂದೆಯವರಾಗಲೀ ಯಾರೆಂದು ಗೊತ್ತಿಲ್ಲ. ಗೌರಿಯವರು ಒಂದು ವಿಚಾರಗಳನ್ನು ಇಟ್ಟುಕೊಂಡು ಬರೆಯುತ್ತಿದ್ದು, ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕಲ್ಲಡ್ಕ ಪ್ರಭಾಕರ್ ಅವರು ಇಂದಿಲ್ಲಿ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಗೌರಿ ನನ್ನ ಬಗ್ಗೆ ಬರೆದ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಯಾರೆ ಆಗಿರಲಿ ಹಿಂಸೆಯನ್ನು ಆರ್‍ಎಸ್‍ಎಸ್ ಸಹಿಸಲು ಸಾಧ್ಯವಿಲ್ಲ. ನಮ್ಮ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಯವಿದೆ. ಆದರೆ ದೈಹಿಕ ಹಲ್ಲೆಯನ್ನು ರಾಷ್ಟ್ರೀಯ ಸಂಘ ಒಪ್ಪುವುದಿಲ್ಲ ಎಂದರು.
ನಮ್ಮದು ಎಡವೂ ಅಲ್ಲ, ಬಲವೂ ಅಲ್ಲ ಕೇವಲ ರಾಷ್ಟ್ರೀಯ ವಾದವೊಂದೆ ನಮ್ಮ ಧ್ಯೇಯ. ದೇಶದ ಜನರ ಹಿತಕ್ಕಾಗಿ ನಾವು ಏನನ್ನೂ ಬೇಕಿದ್ದರೂ ಮಾಡುತ್ತೇವೆ. ಬುದ್ಧಿ ಜೀವಿಗಳು ದೇಶದ ಹಿತ ಮರೆತು ವಿದೇಶಿ ಸಂಸ್ಕೃತಿಯನ್ನು ಬೆಳೆಸಿಕೊಳ್ಳುತ್ತಾರೆ ಇದೊಂದು ದುರ್ದೈವ ಎಂದು ಹೇಳಿದರು.

Leave a Comment