ದೇಹಾರೋಗ್ಯಕ್ಕೆ ತಣ್ಣೀರು ಸ್ನಾನ

ಬೆಳಗಿನ ಅಥವಾ ದೈನಂದಿನ ವ್ಯಾಯಾಮದ ನಂತರ ತಣ್ಣೀರು ಸ್ನಾನ ಆರೋಗ್ಯಕ್ಕೆ ಹಿತಕರ ಎಂದು ಸಂಶೋಧನೆಗಳು ಹೇಳಿವೆ.
ಈಗಿನ ಸಂಶೋಧನೆಗಳು ರುಜುವಾತು ಮಾಡುವ ಮೊದಲೇ ನಮ್ಮ ಪೂರ್ವಜರು, ಋಷಿ ಮುನಿಗಳು ತಣ್ಣೀರು ಸ್ನಾನದ ಮೂಲಕವೇ ದೇಹಾರೋಗ್ಯ ಕಾಪಾಡಿಕೊಂಡು ಬಂದಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಬೆಳಿಗ್ಗೆ ಎದ್ದು ತಣ್ಣೀರು ಸ್ನಾನ ಮಾಡುವುದು ಕಷ್ಟ ಎನಿಸಿದರೇ ಬಿಸಿ ನೀರಿಗಿಂತ ತಣ್ಣೀರು ಒಳ್ಳೆಯದು ಎಂಬುದು ಸಂಶೋಧಕರ ಅಭಿಮತ.
ತಣ್ಣೀರು ಸ್ನಾನದಿಂದ ಹಲವು ಪ್ರಯೋಜನಗಳಿವೆ. ತಣ್ಣೀರು ಸ್ನಾನದಿಂದ ರಕ್ತ ಪರಿಚಲನೆ ಸುಗಮವಾಗಿ ಆಗುತ್ತದೆ.
ತಣ್ಣನೆಯ ನೀರು ದೇಹದ ಬಿಸಿಯ ಮಟ್ಟವನ್ನು ಕಾಯ್ದುಕೊಂಡು ಎಲ್ಲಾ ಅಂಗಗಳಿಗೂ ಸುಲಭವಾಗಿ ಸಾಗುವಂತೆ ಮಾಡುತ್ತದೆ. ಉತ್ತಮ ರಕ್ತ ಸಂಚಾರವಿದ್ದರೇ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ನಿತ್ಯದ ವ್ಯಾಯಾಮ ಮತ್ತಿತರ ಕಾರಣಗಳಿಂದ ನಮ್ಮ ಸ್ನಾಯುಗಳು ಮತ್ತೇ ಕೀಲುಗಳು ತೀವ್ರವಾದ ನೋವಿಗೆ ಒಳಪಡಬಹುದು. ಇಂತಹ ಸಮಯದಲ್ಲಿ ತಣ್ಣೀರು ಸ್ನಾನ ಮಾಡುವುದು ಒಳ್ಳೆಯದು. ಇದರಿಂದ ಆರೋಗ್ಯಕರ ರಕ್ತ ಸಂಚಾರ ಉಂಟಾಗುವುದು ಅಲ್ಲದೆ ಸ್ನಾಯು ಮತ್ತೆ ಕೀಲು ನೋವು ಸಹ ಸುಧಾರಣೆ ಕಾಣುವುದು. ದೇಹದಲ್ಲಿ ಒಂದು ಹೊಸ ಬಗೆಯ ಚೈತನ್ಯ ಸಹ ಉಂಟಾಗುತ್ತದೆ. ಇದು ದಿನವಿಡೀ ಕ್ರಿಯಾಶೀಲವಾಗಿ ಕೆಲಸ ಮಾಡಲು ನೆರವಾಗುತ್ತದೆ. ಜೊತೆಗೆ ಖಿನ್ನತೆ ತಡೆಯಲು ಸಹಾಯ ಮಾಡುತ್ತದೆ. ತಣ್ಣಿರಿನ ಸ್ನಾನ ಮೆದುಳಿನ ಮೇಲೆ ಹೆಚ್ಚು ಪ್ರಭಾವ ಬೀರುವುದರಿಂದ ದಿನವಿಡೀ ಮನಸ್ಸು ಶಾಂತ ಹಾಗೂ ಚೈತನ್ಯದಿಂದ ಇರುವಂತೆ ಮಾಡುತ್ತದೆ. ತಣ್ಣೀರು ಸ್ನಾನ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಒತ್ತಡ ಕೆಲಸದ ನಂತರ ಅಥವಾ ವ್ಯಾಯಾಮದ ಬಳಿಕ ತಣ್ಣಿರಿನ ಸ್ನಾನ ಮಾಡುವುದರಿಂದ ದೇಹಕ್ಕೆ ಅಗತ್ಯವಿರುವ ಶಕ್ತಿ ಪಡೆಯಬಹುದು.

Leave a Comment