ದೇಹದ ಉಷ್ಣಾಂಶ ತಗ್ಗಿಸುವ ನೈಸರ್ಗಿಕ ಪಾನೀಯ

ಬಿಸಿಲಿನ ಧಗೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇದರಿಂದ ದೇಹದ ಉಷ್ಣಾಂಶವೂ ಏರುತ್ತದೆ. ದೇಹದ ಉಷ್ಣತೆ ಏರಿದರೆ ಉರಿ ಮೂತ್ರ, ಹೊಟ್ಟೆ ನೋವು, ಮೈಯೆಲ್ಲಾ ಬೊಬ್ಬೆ ಸಮಸ್ಯೆಗಳು ಆಗಬಹುದು.
ಹಾಗಾಗಿ ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗದಂತೆ ಮುನ್ನೆಚ್ಚರಿಕೆಯಿಂದ ಇರಬೇಕು. ದೇಹವನ್ನು ತಂಪು ಮಾಡಲು ಎಳನೀರು, ಬಾರ್ಲಿ ನೀರು, ಮೆಂತ್ಯೆ ನೆನೆಸಿದ ನೀರು, ಕಲ್ಲಂಗಡಿ ರಸ ಸೇವನೆಯಿಂದ ದೇಹದ ಉಷ್ಣಾಂಶ ತಗ್ಗುತ್ತದೆ.
ಬೇಸಿಗೆಯ ಬಿಸಿಲ ಝಳದಿಂದ ಬಳಸಿದ ದೇಹಕ್ಕೆ ಎಳನೀರು ತಂಪು ನೀಡುತ್ತದೆ. ಎಳನೀರಿನಲ್ಲಿ ಜೀವಸತ್ವಗಳು, ಖನಿಜಾಂಶಗಳು ಹೇರಳವಾಗಿವೆ. ಶರೀರವನ್ನು ತಂಪಾಗಿಸಲು ನಿತ್ಯ ಏಳುನೀರು ಕುಡಿಯುವುದು ಒಳ್ಳೆಯದು.
ಬಾರ್ಲಿ ನೀರು ಸಹ ದೇಹ ತಂಪಾಗಿಸುತ್ತದೆ. ಎರಡು ಚಮಚಗಳಷ್ಟು ಬಾರ್ಲಿಯನ್ನು ಎರಡು ಲೋಟಗಳಷ್ಟು ನೀರಿನಲ್ಲಿ ಅರ್ಧಗಂಟೆ ಕಾಲ ಕುದಿಸಿ ಬಳಿಕ ಬಾರ್ಲಿ ನೀರನ್ನು ತಣ್ಣಗೆ ಮಾಡಿ, ಆಗಾಗ್ಗೆ ಗುಟುಕರಿಸುತ್ತಾ ಇದ್ದಾರೆ. ದೇಹದ ಉಷ್ಣ ತಣ್ಣಗಾಗುತ್ತದೆ.
ಮೆಂತ್ಯೆ ನೆನೆಸಿದ ನೀರು ಆರೋಗ್ಯಕ್ಕೆ ಒಳ್ಳೆಯದು. ಒಂದು ಟೇಬಲ್ ಚಮಚದಷ್ಟು ಮೆಂತ್ಯೆ ಕಾಳುಗಳನ್ನು ಒಂದು ಲೋಟದಷ್ಟು ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿರಿ ಹಾಗೂ ಮಾರನೆ ದಿನ ಬೆಳಿಗ್ಗೆ ಆ ನೀರನ್ನು ಕುಡಿದರೆ ಒಳ್ಳೆಯದು.
ಬೇಸಿಗೆ ಅವಧಿಯಲ್ಲಿ ಮಾವಿನಹಣ್ಣು, ಹೊರತು ಪಡಿಸಿದರೆ ಕಲ್ಲಂಗಡಿ ಒಳ್ಳೆಯದು. ಕಲ್ಲಂಗಡಿಯಲ್ಲಿ ನೀರಿನ ಅಂಶ, ನಾರಿನಂಶ ಹಾಗೂ ಮಿಟಮಿನ್ ಎ ಮತ್ತು ಸಿ ಹೆಚ್ಚಿನ ಪ್ರಮಾಣದಲ್ಲಿದೆ. ಹಾಗಾಗಿ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಇಲ್ಲವೇ ರಸ ಸೇವನೆ ಒಳ್ಳೆಯದು.
ಇದಕ್ಕಿಂತ ಹೆಚ್ಚಾಗಿ ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಬೇಕು. ಹೆಚ್ಚು ನೀರು ಸೇವನೆ ದೇಹವನ್ನು ತಂಪಾಗಿಸಿ, ಬಳಲಿಕೆಯನ್ನು ಕಡಿಮೆ ಮಾಡುತ್ತದೆ.

Leave a Comment