ದೇಸಿ ಮಾತು ಸಂಶೋಧನೆಯ ಅವಿಭಾಜ್ಯ ಅಂಗ-ಡಾ.ಮಂಜುನಾಥ ಬೇವಿನಕಟ್ಟಿ

ಹೊಸಪೇಟೆ,ಸೆ.5- ದೇಸಿ ಮಾತು ಪ್ರತಿಯೊಬ್ಬ ಸಂಶೋಧನಾ ವಿದ್ಯಾರ್ಥಿಯ ಅವಿಭಾಜ್ಯ ಅಂಗವಾಗಬೇಕು, ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ನಿರಂತರವಾಗಿ ಲೇಖನ, ಪುಸ್ತಕ, ಭಾಷಣ, ಸಮ್ಮೇಳನದಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಡಾ.ಮಂಜುನಾಥ ಬೇವಿನಕಟ್ಟಿ ಅಭಿಪ್ರಾಯಪಟ್ಟರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಜನಪದ ಅಧ್ಯಾಯನ ವಿಭಾಗದಲ್ಲಿ ಹಮ್ಮಿಕೊಂಡಿದ್ದ ದೇಸಿ-1ರ ಸಂವಾದ ವಿಷಯದ ಶ್ರಾವಣ ಮಾಸದ ಆಚರಣೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ

ಮಂಗಳವಾರ ಮಾತನಾಡಿದರು.

ದೇಸಿ ಮಾತಿನಿಂದ ಸಿಗುವ ಜ್ಞಾನವನ್ನು ಮಹಾಪ್ರಬಂಧದಲ್ಲಿ ವಿಮರ್ಶಾತ್ಮಕವಾಗಿ ಬರೆಯಬೇಕು ಎಂದರು.

ವಿದ್ಯಾರ್ಥಿಗಳು ದಿನಕ್ಕೆ 12ರಿಂದ 15ಗಂಟೆಗಳ ಕಾಲ ಅಭ್ಯಾಸ ಮಾಡಬೇಕು. ಅಭ್ಯಾಸದಲ್ಲಿ ಸ್ಪರ್ಧಾತ್ಮಕ ವಿಷಯ, ಸಂಶೋಧನಕ್ಕೆ ಸಂಬಂಧಿಸಿದ ವಿಷಯ, ನಿತ್ಯದ ವರ್ತಮಾನದ ವಿಷಯಗಳನ್ನು ಗಮನಿಸಬೇಕು. ಪ್ರಮುಖವಾದ ಅಂಶಗಳನ್ನು ಟಿಪ್ಪಣಿ ಮಾಡಿಟ್ಟಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ ವಿಭಾಗದ ಮುಖ್ಯಸ್ಥ ಡಾ.ಸ.ಚಿ.ರಮೇಶ ಮಾತನಾಡಿ, ಆಧುನಿಕ ಸಂದರ್ಭದಲ್ಲಿನ ಹಬ್ಬ-ಹುಣ್ಣಿಮೆ ಆಚರಣೆಗಳ ಮಹತ್ವನ್ನು ಪರಿಚಯಿಸುತ್ತ ಪ್ರಸ್ತುತ ಶ್ರಾವಣದ ಆಚರಣೆಯನ್ನು ವೈಜ್ಞಾನಿಕ ದೃಷ್ಟಿಕೊನದಿಂದ ನೋಡಬೇಕೆಂದರು. ಶ್ರಾವಣವನ್ನು ಶನಿವಾರ ಮತ್ತು ಸೋಮವಾರಗಳಂದು ಆಚರಿಸುತ್ತಾರೆ. ಹುಬ್ಬಹುಣ್ಣಿಮೆಗಳು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವುದರ ಜೊತೆಗೆ ವಿಶ್ರಾಂತಿ, ನೆಮ್ಮದಿ ಹಾಗೂ ಒಳ್ಳೆಯ ಪೌಷ್ಠಿಕ ಆಹಾರ ಒದಗಿಸಿ, ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯವನ್ನು ಕಾಪಾಡಲು ಸಹಾಯಕಾರಿಯಾಗುತ್ತದೆ ಎಂದರು.

ಅಭಿಲಾಷ ಪ್ರಾರ್ಥಿಸಿದರು, ಆರ್. ಚಂದ್ರು ಸ್ವಾಗತಿಸಿದರು. ಸಚಿಂದ್ರನಾಗ ನಿರೂಪಿಸಿದರು, ಸಣ್ಣವೀರೇಶ್ ವಂದಿಸಿದರು.

Leave a Comment