ದೇಶಾದ್ಯಂತ 300 ಜಿಮ್  ಆರಂಭಿಸಲಿರುವ ಸಲ್ಮಾನ್ ಖಾನ್

ನವದೆಹಲಿ, ಜುಲೈ 3 – ತಮ್ಮ ‘ಬೀಯಿಂಗ್ ಹ್ಯೂಮನ್’ ಸರಣಿಯನ್ನು ವಿಶ್ವಾದ್ಯಂತ ಪಸರಿಸುವಲ್ಲಿ ಯಶಸ್ವಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ಈಗ ದೇಶಾದ್ಯಂತ ಜಿಮ್ ಗಳು ಹಾಗೂ ಫಿಟ್ ನೆಸ್ ಕೇಂದ್ರಗಳ ಸರಣಿ ತೆರೆಯಲು ಮುಂದಾಗಿದ್ದಾರೆ.

2020ರ ವೇಳೆಗೆ ದೇಶಾದ್ಯಂತ 300ಕ್ಕೂ ಹೆಚ್ಚು ಜಿಮ್ ಕೇಂದ್ರಗಳನ್ನು ಆರಂಭಿಸಲು ಸಲ್ಮಾನ್ ನಿಶ್ಚಯಿಸಿದ್ದಾರೆ. ಇಲ್ಲಿಯವರೆಗೆ ದೇಶದ ಎಲ್ಲಾ ಪೀಳಿಗೆಯ ಜನರಿಗೆ ಸ್ಫೂರ್ತಿಯಾಗಿರುವ ಸಲ್ಮಾನ್, ಕೆಲ ತಿಂಗಳ ಹಿಂದೆ ಆರಂಭಿಸಿದ್ದ ‘ಬೀಯಿಂಗ್ ಸ್ಟ್ರಾಂಗ್ ‘ ದೇಹದಾರ್ಡ್ಯತೆಯ ಉಪಕರಣಗಳ ಮಾರಾಟಕ್ಕೆ ಭಾರಿ ಬೇಡಿಕೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಎಸ್ ಕೆ -27 ಜಿಮ್ ಫ್ರಾಂಚೈಸಿ ಆರಂಭಿಸಿದ್ದಾರೆ.

ಎಸ್ ಕೆ -27 ಪ್ರತಿಯೊಬ್ಬ ವ್ಯಕ್ತಿಯನ್ನು ಫಿಟ್ ಹಾಗೂ ಆರೋಗ್ಯವಂತರನ್ನಾಗಿಸುವ ಗುರಿ ಹೊಂದಿದೆ. ಜೊತೆಗೆ, ಇದು ಫಿಟ್ ನೆಸ್ ತರಬೇತುದಾರರು ಹಾಗೂ ಉದ್ಯಮಿಗಳಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶವನ್ನೂ ಕೂಡ ಒಳಗೊಂಡಿದೆ.

2019ರ ಏಪ್ರಿಲ್ ನಲ್ಲಿ ಸಲ್ಮಾನ್ ಖಾನ್ ಆರಂಭಿಸಿದ ತನ್ನ ಫಿಟ್ ನೆಸ್ ಉಪಕರಣ ಬ್ರಾಂಡ್ -ಬೀಯಿಂಗ್ ಸ್ಟ್ರಾಂಗ್ , ಮೂರು ತಿಂಗಳಲ್ಲೇ ದೇಶಾದ್ಯಂತ 175 ಜಿಮ್ ಗಳಲ್ಲಿ ಅಳವಡಿಕೆಯಾಗಿದೆ.

 

Leave a Comment