ದೇಶದ ಪ್ರತಿಯೊಬ್ಬರೂ ಕಾನೂನುಗಳನ್ನು ತಿಳಿಯುವುದು ಅತ್ಯವಶ್ಯ

ಮೈಸೂರು. ಜೂ. 30. ದೇಶದ ಪ್ರತಿಯೊಬ್ಬ ನಾಗರಿಕರೂ ಕಾನೂನುಗಳನ್ನು ತಿಳಿದುಕೊಳ್ಳುವುದು ಬಹಳ ಅತ್ಯವಶ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ
ಬಿ.ಪಿ. ದೇವಮಾನೆ ಹೇಳಿದರು.
ಅವರು ಇಂದು ಬೆಳಿಗ್ಗೆ ಕುವೆಂಪು ನಗರದಲ್ಲಿರುವ ಬಿ.ಸಿ.ಎಂ. ವಿದ್ಯಾರ್ಥಿನಿಲಯದಲ್ಲಿ ಆಯೋಜಿಸಿದ್ದ ಕಾನೂನು ಅರಿವಿನ ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದಲ್ಲಿ ಹಲವಾರು ರೀತಿಯ ಕಾನೂನುಗಳನ್ನು ಜಾರಿಯಲ್ಲಿದೆ. ಅವುಗಳನ್ನು ತಿಳಿದುಕೊಳ್ಳುವುದು ದೇಶದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿರುತ್ತದೆ. ದೇಶದಲ್ಲಿ ಮೋಟಾರು ವಾಹನ ಕಾಯಿದೆ, ಹಿಂದೂ ವಾರಸುದಾರ ಕಾಯಿದೆ, ಮಹಿಳಾ ದೌರ್ಜನ್ಯ ತಡೆ ಕಾಯಿದೆ, ಪೋಕ್ಸೋಕಾಯಿದೆ, ಮಾಹಿತಿ ಹಕ್ಕುಕಾಯಿದೆ ಸೇರಿದಂತೆ ನೂರಾರು ಕಾನೂನುಗಳು ಜಾರಿಯಲ್ಲಿವೆ. ಈ ಎಲ್ಲಾ ಕಾನೂನುಗಳನ್ನು ತಿಳಿದುಕೊಳ್ಳಲು ಆಗದಿದ್ದರೂ ಇವುಗಳಲ್ಲಿ ಮುಖ್ಯವಾದ ಮಹಿಳಾ ದೌರ್ಜನ್ಯ ಕಾಯಿದೆ, ಮೋಟಾರು ವಾಹನಕಾಯಿದೆ, ವರದಕ್ಷಿಣೆ ಕಾಯಿದೆ, ಹಿಸ್ಸೆ (ಪಾಲು) ಕಾಯಿದೆಗಳನ್ನುದರೂ ತಿಳಿದುಕೊಳ್ಳಬೇಕು ಇವುಗಳನ್ನು ತಿಳಿದುಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನ ಕಾಣಲು ಸಾಧ್ಯ ಎಂದು ದೇವಮಾನೆ ನುಡಿದರು.
ಜಿಲ್ಲೆಯಲ್ಲಿ ಕಾಣೂನು ಸೇವಾ ಪ್ರಾಧಿಕಾರವು ಕಾರ್ಯನಿರ್ವಹಿಸುತ್ತಿದ್ದು. ಸಮಾಜದ ಕಡುಬಡವರಿಗೆ ಹಾಗೂ ಅವಿದ್ಯಾವಂತರಿಗೆ, ಕಾನೂನುಗಳನ್ನು ತಿಳಿಯದಿರುವವರು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಅವರಿಗೆ ಸಹಾಯ ಹಸ್ತ ನೀಡುತ್ತಿದ್ದು ಇದರ ಮೂಲಕ ಕಾನೂನುಗಳನ್ನು ಜನತೆಗೆ ತಿಳಿಸಿಕೊಡುತ್ತಿದೆ ಎಂದು ಹೇಳಿದ ದೇವ ಮಾನೆ ಇಂದು ಇಂತಹ ಉತ್ತಮ ಕಾರ್ಯಕ್ರಮವನ್ನು ವಸತಿ ನಿಲಯದಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದ್ದು ಇಲ್ಲಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು

Leave a Comment