ದೇಶದ ಜನರ ಆಶೋತ್ತರ ಈಡೇರಿಸಲು ಎನ್ ಡಿಎ ಬದ್ಧ;ಮೋದಿ

ನವದೆಹಲಿ, ಏ 16-  ದೇಶದ ಜನರ ಕನಸು ಹಾಗೂ ಆಶೋತ್ತರಗಳನ್ನು ಈಡೇರಿಸಲು ಎನ್ ಡಿ ಎ ಪೂರ್ಣ ವಾಗಿ ಬದ್ಧವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ದೂರದರ್ಶನಕ್ಕೆ ನೀಡಿರುವ ಪೂರ್ಣ ಸಂದರ್ಶನದಲ್ಲಿ ಅವರು,  ಕಳೆದ ಐದು ವರ್ಷಗಳ ಆಡಳಿತದಲ್ಲಿ  ದೇಶದ ಜನರ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಲಕ್ಷ್ಯ ನೀಡಲಾಯಿತು. ಮುಂದಿನ ಐದು ವರ್ಷಗಳ ಕಾಲ ದೇಶದ ಜನರ  ಅಶೋತ್ತರಗಳನ್ನು ಈ ಡೇರಿಸಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ದೇಶದ ಅನ್ನದಾತರಾಗಿರುವ  ರೈತರ ಕಲ್ಯಾಣಕ್ಕೆ  ಎನ್ ಡಿಎ ಸರ್ಕಾರ ಬದ್ದವಾಗಿದ್ದು,  ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಖಚಿತ ಆದಾಯ  ಖಾತ್ರಿಗೊಳಿಸಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ಬಹು ದ್ರುವ ಭೌಗೋಳಿಕ ಜಾಗತಿಕ ರಾಜಕೀಯ ಸನ್ನಿವೇಶದಲ್ಲಿ ಭಾರತ ಕಳೆದ ಐದು ವರ್ಷಗಳಲ್ಲಿ  ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಎಲ್ಲರ ಒಳಿತಿಗಾಗಿ  ಎಲ್ಲರೊಂದಿಗೆ ಕಾರ್ಯನಿರ್ವಹಿಸುವುದರ ಮೇಲೆ ಭಾರತ ನಂಬಿಕೆ ಇರಿಸಿದೆ ಎಂದು ಹೇಳಿದ್ದಾರೆ.

 

Leave a Comment