ದೇಶದ ಆರ್ಥಿಕ ದುಸ್ಥಿತಿ ಚಿದು ಆತಂಕ

ನವದೆಹಲಿ, ಸೆ. ೧೧- ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ `ಈ ಕುಸಿತ ಮತ್ತು ಮುಸುಕಿರುವ ಕಾರ್ಮೋಡದಿಂದ ಹೊರಬರಲು ನಿಮ್ಮ ಯೋಜನೆಗಳೇನು?` ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಕಳೆದ ವಾರ ಐ‌ಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಿಂದಾಗಿ ತಿಹಾರ ಜೈಲಿನಲ್ಲಿರುವ ಚಿದಂಬರಂ ತಮ್ಮ ಹೆಸರಿನಲ್ಲಿ ಮೇಲ್ಕಂಡಂತೆ ಟ್ವೀಟ್ ಮಾಡುವಂತೆ ತಮ್ಮ ಕುಟುಂಬಕ್ಕೆ ಹೇಳಿದ್ದರು.

ನ್ಯಾಯ ಮತ್ತು ಅನ್ಯಾಯಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬಲ್ಲ ಬಡಜನರ ಸಾಮರ್ಥ್ಯವನ್ನು ಚಿದಂಬರಂ ಶ್ಲಾಘಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಾನು ಭೇಟಿಯಾದ ಕೆಲವು ಬಡಜನರ ನ್ಯಾಯ ಅನ್ಯಾಯದ ನಡುವಿನ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯ ಕಂಡು ಬೆರಗಾಗಿದ್ದೇನೆ ಎಂದೂ ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಆರ್ಥಿಕತೆಯ ಬಗ್ಗೆ ನನಗೆ ತೀವ್ರ ಆತಂಕ ಉಂಟಾಗಿದೆ. ಇದು ಬಡಜನರ ಮತ್ತು ಮಧ್ಯಮ ವರ್ಗದವರ ಮೇಲೆ ತೀವ್ರ ಪರಿಣಾಮ ಬೀರಿದೆ. ಕೆಳಮಟ್ಟದ ಅದು ಕೆಲವೇ ಕೆಲಸಗಳು ಕಾಣುತ್ತಿವೆ. ಬಂಡವಾಳ ಹೂಡಿಕೆಯಲ್ಲಿ ಹಿಂಜರಿಕೆಯಿಂದ ಹೀಗಾಗುತ್ತಿದೆ. ಇಂಥ ಪರಿಸ್ಥಿತಿಯಿಂದ ದೇಶವನ್ನು ಪಾರು ಮಾ‌ಡಲು ಯೋಜನೆ ಎಲ್ಲಿದೆ ಎಂದು ಮಾಜಿ ಹಣಕಾಸು ಸಚಿವರೂ ಆಗಿರುವ ಚಿದಂಬರಂ ಟ್ವೀಟ್ ಮಾಡಿದ್ದಾರೆ.

ನಾನು ಹಣಕಾಸು ಸಚಿವನಾಗಿದ್ದಾಗ ಐ‌ಎನ್‌ಎಕ್ಸ್ ಮೀಡಿಯಾಗೆ ಅನುಮತಿಗಳನ್ನು ನೀಡಿದ ಕಾರಣ ಅಧಿಕಾರಿಗಳನ್ನು ಬಂಧಿಸಬೇಡಿ ಏಕೆಂದರೆ ಅವಱ್ಯಾರೂ ಯಾವುದೇ ತಪ್ಪು ಮಾಡಿಲ್ಲ ಎಂದೂ ಚಿದಂಬರಂ ಹೇಳಿದ್ದಾರೆ.

Leave a Comment