ದೇಶದ್ರೋಹ ಪ್ರಕರಣ: ಜೈಲು ಶಿಕ್ಷೆಯಿಂದ ವೈಕೋ ಪಾರು

ಚೆನ್ನೈ, ಜುಲೈ 18 – ರಾಜ್ಯಸಭಾ ಸದಸ್ಯ ಹಾಗೂ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ವಿರುದ್ಧದ ಹತ್ತು ವರ್ಷಗಳ ಹಿಂದಿನ ದೇಶದ್ರೋಹ ಪ್ರಕರಣದಲ್ಲಿ ಒಂದು ವರ್ಷದ ಜೈಲುಶಿಕ್ಷೆಯನ್ನು ಮದ್ರಾಸ್ ಹೈಕೋರ್ಟ್ ಅಮಾನತುಗೊಳಿಸಿದೆ

ಕಳೆದ 2009ರ ಪ್ರಕರಣದಲ್ಲಿ ಜುಲೈ 5ರಂದು ವಿಶೇಷ ನ್ಯಾಯಾಲಯ ಒಂದು ವರ್ಷದ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿತ್ತು. ಈ ಸಂಬಂಧ ವೈಕೋ ಅವರು ಜುಲೈ 13ರಂದು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಗುರುವಾರ ಮನವಿಯ ವಿಚಾರಣೆ ನಡೆಸಿದ ನ್ಯಾ. ಪಿ ಡಿ ಆದಿಕೇಶವುಲು, ಒಂದು ವರ್ಷ ಸೆರೆವಾಸದ ಶಿಕ್ಷೆಯನ್ನು ಅಮಾನತುಗೊಳಿಸಿದೆಯಾದರೂ ಯಾವುದೇ ಷರತ್ತು ವಿಧಿಸಿಲ್ಲ. ಆದಾಗ್ಯೂ ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆ ವಹಿಸುವಂತೆ ವೈಕೋ ಅವರಿಗೆ ಅವರ ವಕೀಲರು ಸಲಹೆ ನೀಡಿದ್ದಾರೆ.

Leave a Comment