ದೇಶದಲ್ಲೇ ಅತ್ಯಾಧುನಿಕ ಶಸ್ತ್ರಾಸ್ತ್ರ ತಯಾರಿಕೆಗೆ ಆಗ್ರಹ

ನವದೆಹಲಿ, ಅ.೧೬- ಅತಿ ಸಂಕೀರ್ಣ ಹಾಗೂ ಉನ್ನತ ತಂತ್ರಜ್ಞಾನ ಉಳ್ಳ ಶಸ್ತ್ರಾಸ್ತ್ರಗಳ ಕುರಿತಂತೆ ಪರಾವಲಂಬನೆಯಿಂದ ಹೊರಬರಲು ದೇಶಿಯವಾಗಿಯೇ ತ್ವರಿತಗತಿಯಲ್ಲಿ ಉನ್ನತ ತಂತ್ರಜ್ಙಾನದ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಬೇಕೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವೆಲ್ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯನ್ನು ಆಗ್ರಹಿಸಿದ್ದಾರೆ.ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದ್ದು, ಅತ್ಯಗತ್ಯದ ಸಂದರ್ಭಗಳಲ್ಲಿ ಅನ್ಯದೇಶಗಳನ್ನು ಅವಲಂಬಿಸಬೇಕಿದೆ.
ಇದರಿಂದ ಹೊರಬರಲು ದೇಶಿಯವಾಗಿಯೇ ಹೊಸತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯಿಂದ ಶಸ್ತ್ರಾಸ್ತ್ರಗಳ ಬಗ್ಗೆ ದೇಶ ಸ್ವಾವಲಂಬನೆಯಾಗಬೇಕು. ಹೊಸಹೊಸ ತ್ರಂತ್ರಜ್ಞಾನ ಶೋಧನೆ ಮತ್ತು ಅಭಿವೃದ್ಧಿಯಿಂದ ದೇಶದ ರಕ್ಷಣಾ ವ್ಯವಸ್ಥೆ ಸ್ವಯಂ ಶಕ್ತಿ ಆಧಾರಿತವಾಗಬೇಕು ಎಂದು ಈ ಇಬ್ಬರೂ ನಾಯಕರು
ಇಲ್ಲಿ ಆಯೋಜನೆಗೊಂಡಿರುವ ಡಿಆರ್‌ಡಿಒ ನಿರ್ದೇಶಕರ ೪೧ನೇ ಸಮಾವೇಶದಲ್ಲಿ ಮಾತನಾಡುತ್ತ ಹೇಳಿದ್ದಾರೆ.
ಸಶಸ್ತ್ರ ಪಡೆಗಳ ನಿರ್ಧಿಷ್ಟ ಅಗತ್ಯಗಳಿಗೆ ಅನುಗುಣವಾಗಿ ರಕ್ಷಣಾ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಬೇಕಿರುವುದು ಇಂದಿನ ಅಗತ್ಯವಾಗಿದೆ. ದೇಶ ಶಕ್ತಿಯುತ ರಕ್ಷಣಾ ಸಾಮರ್ಥ್ಯ ಹೊಂದುವುದು ಹಿಂದೆಂದಿಗಿಂತಲೂ ಈಗ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಇಲ್ಲಿ ಗೆಲ್ಲುವವನಿಗೇ ಎಲ್ಲಾ ಕಪ್‌ಗಳು ಸಿಗಲಿವೆ. ರನ್ನಱ್ಸ್ ಆಪ್ ಎನ್ನುವ ಪ್ರಶ್ನೇಯೇ ಇಲ್ಲ ಎಂದೂ ಡೋವೆಲ್ ಹೇಳಿದ್ದಾರೆ.

Leave a Comment