ದೇಶದಲ್ಲಿ ಬಿಜೆಪಿ ಸರ್ವಾಧಿಕಾರ ಆಡಳಿತ: ಖರ್ಗೆ

ಕಲಬುರಗಿ ನ9: ದೇಶದಲ್ಲೀಗ ಬಿಜೆಪಿ ಸರ್ವಾಧಿಕಾರದ ಆಡಳಿತ  ಜಾರಿಯಲ್ಲಿದೆ ಎಂದು ನರೇಂದ್ರ ಮೋದಿ ಸರ್ಕಾರದ ವಿರುದ್ಧ ,ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಟುವಾಗಿ  ಟೀಕಿಸಿದರು.

ಕಲಬುರಗಿ ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯವೈಖರಿಗೆ ಜನ ಬೇಸತ್ತಿದ್ದಾರೆ ಎಂದರು.

ಈ ಹಿನ್ನೆಲೆಯಲ್ಲಿಯೇ ದೇಶದಲ್ಲಿ ಬಿಜೆಪಿಯೇತರ ಮಹಾಮೈತ್ರಿ ನಡೆದಿದೆ.ಮಹಾಮೈತ್ರಿಗೆ  ದೇಶದೆಲ್ಲೆಡೆ  ಜನರು  ವ್ಯಾಪಕ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ. ಇತ್ತೀಚಿಗೆ ಕರ್ನಾಟಕದಲ್ಲಿ ನಡೆದ ಉಪಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಾಮೂಹಿಕ ನಾಯಕತ್ವ::

ಮುಂದಿನ ಲೋಕಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ.ನಮಗೆ ಗೆಲವು ಶತಸಿದ್ಧ ಎಂದು ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಾಂಗ್ರೆಸ್ ಪಕ್ಷ ಗುರುತಿಸಲ್ಪಡುವದರಿಂದ ಮಹಾಮೈತ್ರಿಗೆ ಕಾಂಗ್ರೆಸ್ ಮುಂದಾಳತ್ವ ಇರಲಿದೆ ಎಂದರು.

ವ್ಯವಸ್ಥಿತ ಲೂಟಿ::

ಕೇಂದ್ರ ಆರ್ಥಿಕ ಸಚಿವ ಅರುಣ್ ಜೇಟ್ಲಿಯವರು ನೋಟು ಅಪನಗದೀಕರಣದಿಂದ ಆರ್ಥಿಕ ಸುಧಾರಣೆ ಆಗಿದೆ ಎಂದಿದ್ದಾರೆ. ಆದರೆ ಮೂಲಭೂತವಾಗಿ ಅಂತಹ ಬದಲಾವಣೆಗಳೇನೂ ಆಗಿಲ್ಲ.ನೋಟು ಅಪನಗದೀಕರಣ ಒಂದು ವ್ಯವಸ್ಥಿತ ಲೂಟಿಯಾಗಿದ್ದು,ಜನ ಸಾಮಾನ್ಯರಿಗೆ ಯಾವುದೇ ಲಾಭ ಆಗಿಲ್ಲ ಎಂದು ಹರಿಹಾಯ್ದರು.ಉದ್ಯೋಗ ಸೃಷ್ಟಿ, ಭಯೋತ್ಪಾದನೆ ನಿರ್ಮೂಲನೆ,ಭ್ರಷ್ಟಾಚಾರ ತಡೆಯ ಬಗ್ಗೆ ಪ್ರಧಾನಮಂತ್ರಿ ಮಾತಾಡಿದರೇ, ಹೊರತು ಒಂದನ್ನೂ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲಿಲ್ಲ ಎಂದರು…

Leave a Comment