ದೇಶದಲ್ಲಿ ಅಸಹಿಷ್ಣುತೆ ಹೆಚ್ಚಳ: ಕುಂವೀ ಕಳವಳ

ಕಲಬುರಗಿ ಡಿ 7: ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಖ್ಯಾತ ಲೇಖಕ ಕುಂ.ವೀರಭದ್ರಪ್ಪ ಅವರು ಕಳವಳ ವ್ಯಕ್ತ ಪಡಿಸಿದರು.
ಅವರಿಂದು ಗುಲಬರ್ಗ ವಿಶ್ವವಿದ್ಯಾಲಯದ ಡಾ ಬಿ ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಕನ್ನಡ ಅಧ್ಯಯನ ಸಂಸ್ಥೆ ,ಪ್ರಸಾರಾಂಗ,ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಮತ್ತು ಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠ ಆಯೋಜಿಸಿದ ಸಾಮಾಜಿಕ ಸೌಹಾರ್ದತೆಯಡೆಗೆ ಸಾಹಿತ್ಯ ವಿಷಯ ಕುರಿತಾದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಒಂದು ಧರ್ಮ, ಒಂದು ಭಾಷೆ ಪರಿಕಲ್ಪನೆ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾರಕ. ಸ್ಥಳೀಯ ಸಂಸ್ಕøತಿ ಭಾಷೆಯನ್ನು ಇದು ನಾಶಪಡಿಸುತ್ತದೆ.ಇದನ್ನು ಉಳಿಸುವ ಅಗತ್ಯತೆ ವಿದ್ಯಾವಂತರ ಮೇಲಿದೆ.
ದೇವರು ಧರ್ಮವನ್ನು ಪ್ರಶ್ನಿಸುವವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ವ್ಯವಸ್ಥೆಯನ್ನು ಪ್ರಶ್ನಿಸುವವರನ್ನು ಹತ್ಯೆ ಮಾಡಲಾಗುತ್ತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಲೇಖಕರಲ್ಲಿ ಉಪದ್ರವಿ ಮತ್ತು ನಿರುಪದ್ರವಿ ಎಂದು ಎರಡು ಬಗೆ. ರಾಜಸತ್ತೆಯನ್ನು ಪ್ರಶ್ನಿಸುವವರು ಉಪದ್ರವಿ ಲೇಖಕರು .ಉಪದ್ರವಿ ಲೇಖಕರು ಪ್ರಜಾಪ್ರಭುತ್ವದ ಕಾವಲು ನಾಯಿ ಇದ್ದಹಾಗೆ. ಸಮಾಜವನ್ನು ಸ್ವಸ್ಥವಾಗಿ ಇಡಲು ಅವರು ಅಗತ್ಯ ವಿದೆ. ಚಂಪಾ( ಚಂದ್ರಶೇಖರಪಾಟೀಲ ) ಎಲ್ಲ ಉಪದ್ರವಿ ಲೇಖಕರ ಕ್ಯಾಪ್ಟನ್.ಎಂದು ಬಣ್ಣಿಸಿದರು.
ಫ್ಯಾಸಿಜಂ ಶಕ್ತಿಗಳ ವಿರುದ್ಧ ಮಾತಾಡುವ ಶಕ್ತಿಯನ್ನು ಲೇಖಕರು ಬೆಳೆಸಿಕೊಳ್ಳಬೇಕು. ಇಂದಿನ ಲೇಖಕರು ಗೌರಿ ಲಂಕೇಶ ,ಎಂಎಂ ಕಲಬುರ್ಗಿ ಅವರ ಆಶಯಗಳ ಉತ್ತರಾಧಿಕಾರಿಗಳಾಗುವ ಅವಶ್ಯಕತೆ ಇದೆ
ಗೌರಿ ಲಂಕೇಶ, ಕಲಬುರಗಿ ಅವರನ್ನು ಹತ್ಯೆ ಮಾಡಿದವರನ್ನು ಬಂಧಿಸದ ಜೋಭದ್ರಗೇಡಿ ಸರಕಾರವನ್ನು ಇಂದು ಪ್ರಶ್ನಿಸಬೇಕಿದೆ ಎಂದರು.
ಅಭಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಬಸವರಾಜ ಸಾದರ ಮುಖ್ಯ ಅತಿಥಿಗಳಾಗಿ ಆಗಮಿಸಿದರು.ಪ್ರೊ ದಯಾನಂದ ಅಗಸರ, ಪ್ರೊ ಲಕ್ಷ್ಮಣ ರಾಜನಾಳಕರ್, ಪ್ರೊ ಎಚ್ ಟಿ ಪೋತೆ ,ಪ್ರೊ ಸಂಗನಗೌಡ ಪಾಟೀಲ ,ನಾಗೇಶ ಕೊಳ್ಳಿ, ,ಮಹಮದ್ ಅಸಗರ್ ಚುಲಬುಲ್ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕುಲಪತಿ ಪ್ರೊ ಎಸ್ ಆರ್ ನಿರಂಜನ ಅವರು ಅಧ್ಯಕ್ಷತೆ ವಹಿಸಿದರು.ಅನೇಕ ಸಾಹಿತ್ಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು

Leave a Comment