ದೇವಾಲಯವನ್ನು ಜೀರ್ಣೋದ್ದಾರಕ್ಕೆ ದೇಣಿಗೆ ಸಂಗ್ರಹ

ತಿ. ನರಸೀಪುರ : ಮೇ.6- ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯವನ್ನು ಜೀರ್ಣೋದ್ದಾರಗೊಳಿಸಲು ತಾಲ್ಲೂಕಿನಾದ್ಯಂತ ಭಕ್ತರಿಂದ ದೇಣಿಗೆ ಸಂಗ್ರಹಿಸಲು ಅಯ್ಯಪ್ಪಸ್ವಾಮಿ ರಥ ಯಾತ್ರೆ ಹಮ್ಮಿಕೊಳ್ಳಲಾಗಿದೆ
ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಬಳಿ 1996ರಲ್ಲಿ ಪುಟ್ಟ ಗುಡಿ ನಿರ್ಮಿಸಲಾಗಿತ್ತು. ಪ್ರತಿ ವರ್ಷ ದೇವಾಲಯದಲ್ಲಿ ಜ್ಯೋತಿ ಪೂಜೆ, ಇತರೆ ಪೂಜಾ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದ್ದು, ಅಪೂರ್ಣಗೊಂಡಿರುವ ದೇವಾಲಯವನ್ನು ಪೂರ್ಣಗೊಳಿಸುವ ಸಂಬಂಧ ದೇವಾಲಯದ ಸಮಿತಿಯ ಮುಖಂಡರು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ಭಕ್ತರಿಂದ ಜೀರ್ಣೋದ್ಧಾರಕ್ಕೆ ಅಗತ್ಯ ನೆರವು ಪಡೆಯಲು ಈ ರಥಯಾತ್ರೆ ಪ್ರಾರಂಭಿಸಲಾಗಿದ್ದು, ಭಕ್ತರು ಸಹಾಯ ಹಸ್ತ ನೀಡುವಂತೆ ಟಸ್ಟ್ ನ ಮುಖಂಡರು ಮನವಿ ಮಾಡಿದ್ದಾರೆ.
ಮುಖಂಡ ಸಿದ್ದಲಿಂಗಮೂರ್ತಿ, ಚಿನ್ನಸ್ವಾಮಿ, ಕುಮಾರ್, ಮೂಗೂರು ಸಿದ್ದರಾಜು, ಕಿರಗಸೂರು ಪ್ರಸಾದ್ ನಾಯ್ಕ್, ಬಸವಲಿಂಗಸ್ವಾಮಿ, ಗುಂಡ, ಸೋಮಣ್ಣ, ಗಿರೀಶ್, ಅರ್ಚಕ ಎಸ್. ಸ್ವಾಮಿ ಮತ್ತಿತರರು ಇದ್ದರು

Leave a Comment