ದೇವಾಂಗಬೀದಿಯಲ್ಲಿ ಗಣೇಶ ಪ್ರತಿಷ್ಠಾಪನೆ

ಚಾಮರಾಜನಗರ ಸೆ.14- ನಗರದ ದೇವಾಂಗ 2ನೇ ಬೀದಿಯ ದೊಡ್ಡಗರಡಿ ಸಮೀಪದಲ್ಲಿ ಸಿದ್ದಿ ವಿನಾಯಕ ಯುವಕರ ಮಂಡಳಿವತಿಯಿಂದ ಗಣೇಶನ ಹಬ್ಬದ ಪ್ರಯುಕ್ತ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸಮಾಜ ಸೇವಕ ಎಲ್. ಸುರೇಶ್ ಮಾತನಾಡಿ ಸುಮಾರು 23ವರ್ಷಗಳಿಂದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿಕೊಂಡು ಬಂದಿದ್ದೇವೆ. ಇದಕ್ಕೆ ಈ ಬಡಾವಣೆಯ ಜನರ ಯುವಕರ ಪ್ರೊತ್ಸಾಹತುಂಬ ಇದೆ ಈ ಗಣಪತಿಯನ್ನು 3 ದಿನಗಳ ಕೂರಿಸಿ ಶನಿವಾರ ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿವರ್ಷವೂ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಮಕ್ಕಳಿಂದ ಹಾಡುಗಾರಿಕೆ, ದೇವರನಾಮದ ಕಾರ್ಯಕ್ರಗಳು ನಡೆಯಲಿದೆ ಇಂದೆ 15ದಿನಗಳ ಕಾಲ ಗಣಪತಿಯನ್ನು ಕೂರಿಸಿ ಬೆಂಗಳೂರು ಮೈಸೂರು ಹಾಗೂ ಚಲನಚಿತ್ರ ನಟರು ಈ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದು ಎಲ್.ಸುರೇಶ್ ತಿಳಿಸಿದರು
ನಗರಸಭಾ ಸದಸ್ಯ ಮಂಜುನಾಥ್ ಮಾತನಾಡಿ ನಗರಸಭೆ ವತಿಯಿಂದ ಪ್ರತಿದಿನಲೂ ಸ್ವಚ್ಚತ ಕಾರ್ಯಕ್ಕೆ ಏರ್ಪಡು ಮಾಡುವುದಾಗಿ ತಿಳಿಸಿದರು. ಈ ಬಡವಾಣೆಯ ಯುವಕರು ಧಾರ್ಮಿಕವಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಇವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ಪೂಜಾಕಾರ್ಯವನ್ನು ವೇದಬ್ರಹ್ಮಶ್ರೀ ಶಾಂಭಟ್ಟರ ಮೊಮ್ಮಗ ವಲ್ಲೇಶ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಮನೋಜ್‍ಪಟೇಲ್, ಸಿದ್ದಿ ವಿನಾಯಕ ಯುವಕರ ಮಂಡಳಿ ಸದಸ್ಯರಾದ ಯಶವಂತ, ಅಭಿಷೇಕ್, ನಿಖಿಲ್, ಶಿವರಾಂ, ಕೃಷ್ಣನ್, ರಮೇಶ್‍ಬೆಲ್ಲ, ನಾಗೇಂದ್ರಸ್ವಾಮಿ, ಮಹೇಶ್ ಹಾಗೂ ಬಡಾವಣೆ ನಿವಾಸಿಗಳು ಹಾಜರಿದ್ದರು.

Leave a Comment