ದೇವಲ ಮಹರ್ಷಿ ಜಯಂತಿ -ಅದ್ದೂರಿ

ಗುಳೇದಗುಡ್ಡ ನ.13- ದೇವಲ ಮಹರ್ಷಿ ಜಯಂತಿ ಅಂಗವಾಗಿ ಪಟ್ಟಣದ ದೇವಾಂಗ ಸಮಾಜದ ದತ್ತಿ, ದೇವಾಂಗ ನೌಕರರ ಸಂಘ, ಶ್ರೀ ಆದಿಶಕ್ತಿ ಬನಶಂಕರಿ ಮಹಿಳಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ದೇವಲ ಮಹರ್ಷಿಯ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ನಡುವಿನಪೇಟೆಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ದೇವಲ ಮಹರ್ಷಿ ಭಾವಚಿತ್ರಕ್ಕೆ ಅಭಿಷೇಕ ಹಾಗೂ ಪೂಜೆ ಜರುಗಿತು. ಮಧ್ಯಾಹ್ನ ಆರಂಭಗೊಂಡ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ರಾಮದುರ್ಗದ ಶ್ರೀ ಶಾಖಾಂಭರಿ ಸಂಘದವರಿಂದ ಗೊಂಬೆ ಪ್ರದರ್ಶನ, ಡೊಳ್ಳು ಕುಣಿತ, ಕರಡಿ ಮಜಲು ಹಾಗೂ ಕಳಸದಾರತಿ ಹಿಡಿದ ಸುಮಂಗಲೆಯರು ಮೆರಗು ತಂದರು.
ತೆರೆದ ಟ್ರಾಕ್ಟರ್‍ನಲ್ಲಿ ಕೈಮಗ್ಗವನ್ನು ಸ್ಥಾಪಿಸಿ ದೇವಲ ಮಹರ್ಷಿಯವರ ಛದ್ಮವೇಷವನ್ನು ಧರಿಸಿ ನೇಯ್ಗೆ ನೇಯುತ್ತಿರುವ ಕಮತಗಿ ಪಟ್ಟಣದ ರವಿ ರಾಮಣ್ಣ ವನಕಿಯವರ ವಿನ್ಯಾಸ ನೋಡುಗರ ಗಮನ ಸೆಳೆಯಿತು.
ದೇವಾಂಗ ಸಮಾಜ ದತ್ತಿ ಗೌರವಾಧ್ಯಕ್ಷ ಅಮಾತೆಪ್ಪ ಕೊಪ್ಪಳ, ಅಧ್ಯಕ್ಷ ಶಂಕ್ರಣ್ಣ ಮೇಡಿ, ಉಪಾಧ್ಯಕ್ಷ ರಾಮಣ್ಣ ಹಾನಾಪೂರ, ಶ್ರೀಕಾಂತ (ಬಾಬು) ದಡ್ಡಿ, ವಿಠ್ಠÀಲ ಶಿರೂರ, ಗುಂಡಪ್ಪ ಗೋವನಕೊಪ್ಪ, ನಾಗೇಂದ್ರಪ್ಪ ನೇಮದಿ, ಶಶಿಧರ ಬಿಜ್ಜಳ, ಬುದ್ದಪ್ಪ ಕಾಳಗಿ, ಶಂಕ್ರಪ್ಪ ಶಿರೂರ, ಸೋಮಶೇಖರ ಹುಲ್ಲೂರ, ಈರಣ್ಣ ಕೊಳ್ಳಿ, ಕೇಮಣ್ಣ ಮೇಡಿ, ದೇವೇಂದ್ರಪ್ಪ ಅಂಕದ, ಭದ್ರಪ್ಪ ಕೊಳ್ಳಿ, ಎನ್.ಆರ್.ಅಡಕಿ, ಭಾಸ್ಕರಪ್ಪ ಗಾಡದ, ರವೀಂದ್ರ ಹುಲ್ಲೂರ, ಗುರಪ್ಪ ಹುಣಶ್ಯಾಳ, ಮುಕ್ಕುಂದಪ್ಪ ದೊಡ್ಡಮನಿ, ಹನುಮಂತಪ್ಪ ಕಟಗೇರಿ, ಬಸಣ್ಣ ಕೊಳ್ಳಿ, ಮಲಕಾಜಪ್ಪ ಮೇಡಿ, ಶಂಕ್ರಪ್ಪ ಗಣಿ, ತುಕ್ಕಪ್ಪ ಬೆಲ್ಲದ, ನಾರಾಯಣಪ್ಪ ಜವಳಿ, ರವಿ ಬಳಗೇರ, ಪ್ರಕಾಶ ಗಾಯದ, ಮಹಾದೇವ ಬೇನಾಳ, ಶಾಸವ್ವ ಜೀವರಗಿ, ನಾಗರತ್ನಾ ಕೊಪ್ಪಳ ಮತ್ತಿತರರಿದ್ದರು.

Leave a Comment