ದೇವರ ಸನ್ನಿಧಿಯಲ್ಲೇ  ಆಘಾತಕಾರಿ ಘಟನೆ

ಹುಬ್ಬಳ್ಳಿ,  ಪೂಜೆಗೆಂದು ದೇವಾಲಯಕ್ಕೆ ಬಂದಿದ್ದ ಮಹಿಳೆಯೊಬ್ಬರ ಸೀರೆಗೆ ಬೆಂಕಿ ತಗಲಿದ ಆಘಾತಕಾರಿ ಘಟನೆ ನಡೆದಿದೆ.

ಹುಬ್ಬಳ್ಳಿಯ ವಿಶ್ವೇಶ್ವರಯ್ಯ ನಗರದ ವಿಶ್ವನಾಥ ದೇವಾಲಯ ಆವರಣದಲ್ಲಿ ಘಟನೆ ನಡೆದಿದ್ದು, ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮಹಿಳೆಯೊಬ್ಬರು ನಾಗರಕಟ್ಟೆಗೆ ಪೂಜೆ ಸಲ್ಲಿಸಿ ದೀಪ ಹಚ್ಚಿದ್ದು, ಅದರ ಜ್ವಾಲೆ ಸೀರೆಗೆ ತಗುಲಿದೆ.

ಆದರೆ, ಇದನ್ನು ಗಮನಿಸದ ಮಹಿಳೆ ಪೂಜೆ ಮುಗಿಸಿ ತೆರಳುವ ಸಂದರ್ಭದಲ್ಲಿ ಬೆಂಕಿಯನ್ನು ಗಮನಿಸಿದ್ದಾರೆ. ಕ್ಷಣಾರ್ಧದಲ್ಲಿ ಇಡೀ ಸೀರೆಗೆ ಬೆಂಕಿ ವ್ಯಾಪಿಸಿ ಧಗಧಗನೆ ಹೊತ್ತಿ ಉರಿದಿದೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಗಾಬರಿಯಾದ ಮಹಿಳೆ ದೇವಾಲಯದ ಒಳಗೆ ಓಡಿ ಹೋಗಿದ್ದಾರೆ. ಬೇರೆ ಮಹಿಳೆಯರು ಕೂಡ ಅವರ ನೆರವಿಗೆ ಧಾವಿಸಿದ್ದು, ಬೆಂಕಿ ತಗಲಿದ ಸೀರೆಯನ್ನು ತೆಗೆಸಿ ಮಹಿಳೆಯನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.

Leave a Comment