ದೇವರ ಮೊರೆ ಹೋದ ಬಿ.ಸಿ.ಪಾಟೀಲ್, ಭೈರತಿ ಬಸವರಾಜ್

ಮುಂಬೈ : ರಾಜ್ಯ ರಾಜಕೀಯದ ಹೈಡ್ರಾಮ ಬಿಸಿ ಬಿಸಿ ನಡೆಯುತ್ತಿದೆ. ಬೆಂಕಿ ಬಿರುಗಾಳಿ ರಾಜ್ಯ ರಾಜಕೀಯದಲ್ಲಿ ಎದ್ದಿದ್ದರೇ, ಅತ್ತ ಮುಂಬೈನ ಹೋಟೆಲ್ ನಲ್ಲಿರುವ ರಾಜೀನಾಮೆ ನೀಡಿರುವ ಶಾಸಕರು ಅಪ್ಪಾ ಸ್ವಾಮಿ… ಮುಂದೆ ಏನ್ ಆಗುತ್ತೋ… ನಮ್ಮ ಪರವಾಗಿ ಇರಲಿ ಎನ್ನುವಂತೆ ದೇವರ ಮೊರೆ ಹೋಗಿದ್ದಾರೆ.

ರಾಜ್ಯ ವಿಧಾನಮಂಡಲದ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಇದರ ನಡುವೆ ಸುಪ್ರೀಂ ಕೋರ್ಟ್ ಕೂಡ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರವನ್ನಾಗಲೀ, ರಾಜೀನಾಮೆ ಅಂಗೀಕಾರವನ್ನಾಗಲೀ ಮಾಡದೇ ಯಥಾಸ್ಥಿತಿಯನ್ನು ಕಾಪಾಡುವಂತೆ ಸೂಚಿಸಿದೆ. ಹೀಗಾಗಿ ಕೊಂಡ ರಾಜ್ಯ ಸರ್ಕಾರಕ್ಕೆ ರಿಲೀಫ್ ಸಿಕ್ಕಿದೆ.

ಮತ್ತೊಂದೆಡೆ ಸುಪ್ರೀಂ ಕೋರ್ಟ್ ನ ತೀರ್ಪು ಬಂಡಾಯ, ರಾಜೀನಾಮೆ ನೀಡಿದ ಶಾಸಕರ ಪರ ಎನಿಸಿದರೂ ಕೂಡ, ಬಿಜೆಪಿಗೆ ಬಿಗ್ ಶಾಕ್ ಎಂದೇ ಹೇಳಲಾಗಿದೆ. ಈ ಮಧ್ಯೆ ಮುಂಬೈನ ರಿನೈಸೆನ್ಸ್ ಹೋಟೆಲ್ ನಲ್ಲಿರುವ ಅತೃಪ್ತ, ಬಂಡಾಯ ಶಾಸಕರು ಮಾತ್ರ ನಗರದ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಭೇಟಿ ಕೊಟ್ಟು, ದೇವರ ಮೊರೆ ಹೋಗಿದ್ದಾರೆ.

ಶಾಸಕ ಬಿ.ಸಿ.ಪಾಟೀಲ್, ಭೈರತಿ ಬಸವರಾಜ್ ಸೇರಿಕೊಂಡು ಮುಂಬೈನ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ದೇವರೇ ನಮ್ಮನ್ನು ನೀನೇ ರಕ್ಷಿಸಪ್ಪಾ ಎಂದು ವಿಘ್ನವಿನಾಯಕನ ಮೊರೆ ಹೋಗಿ, ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಅಧಿವೇಶನಕ್ಕೆ ಚಕ್ಕರ್ ಹಾಕಿ, ದೇವಸ್ಥಾನಕ್ಕೆ ಹಾಜರಾಗಿದ್ದಾರೆ.

Leave a Comment