ದೇವದುರ್ಗ ಅಭಿವೃದ್ಧಿಗೆ ಶುಭ ಸಂದರ್ಭ

ರಾಯಚೂರು.ಆ.01- ಕಳೆದ ಆರು ವರ್ಷಗಳಿಂದ ರಾಜ್ಯದಲ್ಲಿದ್ದ ಯಮಗಂಡ ಸರ್ಕಾರ ಪತನದ ನಂತರ ಐದು ದಿನಗಳಿಂದ ಶುಭ ಸರ್ಕಾರ ಆರಂಭ ಅಭಿವೃದ್ಧಿಗೆ ಪೂರಕವಾಗಿದೆಂದು ಶಾಸಕ ಕೆ.ಶಿವನಗೌಡ ನಾಯಕ ಅವರು ಹೇಳಿದರು.
ಕ್ಷೇತ್ರದ ನಗರಗುಂಡ ಮಾರ್ಗದ ಮಧ್ಯೆ ಬರುವ ಬಸವ ದೇವರ ಅರವಿನ ದೇವರಮನೆ ಆವರಣದಲ್ಲಿ 10 ಲಕ್ಷ ವೆಚ್ಚದಲ್ಲಿ ಬಸವನ ಭವನ ಕಾಮಗಾರಿಗೆ ಅಡಿಗಲ್ಲು ಹಾಕಿ, ಮಾತನಾಡಿದರು. ಇನ್ನೂ ಮುಂದೆ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಳ್ಳಲಾಗಿದೆ. ಕಳೆದ ಆರು ವರ್ಷಗಳಿಂದ ಅಭಿವೃದ್ಧಿ ಕುಂಠಿತ ಸರ್ಕಾರ ಅಸ್ತಿತ್ವದಲ್ಲಿತ್ತು. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದ್ದವು.
ಈಗ ಅಂತಹ ಪರಿಸ್ಥಿತಿಯಿಲ್ಲ. ಗುತ್ತೇದಾರರು ಮತ್ತು ಅಧಿಕಾರಿಗಳು ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ತಾಕೀತು ಮಾಡಿದರು. ತಿಂಥಿಣಿ ಬ್ರಿಡ್ಜ್ ಬಳಿ ಮಳೆ ಜಲಾಶಯ ನಿರ್ಮಾಣ ಮಾಡಲಾಗುವುದು. ಗಂಗಾವತಿಯಲ್ಲಿ ಆರು ಸಾವಿರ ಕೋಟಿ ವೆಚ್ಚದಲ್ಲಿ ಮತ್ತೊಂದು ಜಲಾಶಯ ನಿರ್ಮಿಸಲಾಗುತ್ತಿದೆ. ಜಿಲ್ಲೆ ಹಾಗೂ ತಾಲೂಕಿನಲ್ಲಿ ಅಭಿವೃದ್ಧಿಯ ಪರ್ವ ಆರಂಭಗೊಂಡಿದೆ.
ಈ ಸಂದರ್ಭದಲ್ಲಿ ಅರವಿನ ಮನೆ ಗುರುಬಸವ ದೇವರುಸ್ವಾಮಿ, ಬಸವನಗೌಡ, ಗೋಪಾಲಕೃಷ್ಣಾ, ಮಲ್ಲಿಕಾರ್ಜುನ ಪಾಟೀಲ್, ಜಂಬಣ್ಣ ನಿಲೋಗಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment